ರೋಹಿತ್ ಅರ್ಧ ಶತಕ – ಕಿವಿಸ್‍ಗೆ 164 ರನ್‍ಗಳ ಗುರಿ

Public TV
2 Min Read
Rohit Sharma

ಮೌಂಟ್ ಮಾಂಗನುಯಿ: ನಾಯಕ ರೋಹಿತ್ ಶರ್ಮಾ ಅರ್ಧ ಶತಕದ ನೆರವಿನೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಿವಿಸ್ ಪಡೆಗೆ 164 ರನ್‍ಗಳ ಗುರಿ ನೀಡಿದೆ.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಣಕ್ಕಿಳಿಯಿತು. ಆರಂಭಿಕರಾಗಿ ಕೆ.ಎಲ್.ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಕಣಕ್ಕಿಳಿದರು. ಐದು ಎಸೆತದಲ್ಲಿ ಎರಡು ರನ್ ಗಳಿಸಿದ್ದ ಸ್ಯಾಮ್ಸನ್ ಕುಗ್ಗಿಲಿಯನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸುಕೊಳ್ಳುವಲ್ಲಿ ವಿಫರಾದರು. ಸ್ಯಾಮ್ಸನ್ (2 ರನ್, 5 ಎಸೆತ) ವಿಕೆಟ್ ಪಡೆಯುವ ಮೂಲಕ ಕುಗ್ಗಿಲಿಯನ್ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ನಂತರ ಕೆ.ಎಲ್.ರಾಹುಲ್ ಗೆ ನಾಯಕ ರೋಹಿತ್ ಶರ್ಮಾ ಜೊತೆಯಾಗಿ ಕಿವಿಸ್ ಬೌಲರ್ ಗಳನ್ನು ತಮ್ಮ ಬಿರುಸಿನ ಹೊಡೆತದ ಮೂಲಕ ದಂಡಿಸಿದರು.

ಹ್ಯಾಮಿಶ್ ಬೆನ್ನೆಟ್ ಎಸೆದ 11.3ನೇ ಎಸೆತದಲ್ಲಿ ಕೆ.ಎಲ್.ರಾಹುಲ್ (45 ರನ್, 33 ಎಸೆತ) ಸ್ನಾಂಟ್ನರ್ ಗೆ ಕ್ಯಾಚ್ ನೀಡಿ ಔಟ್ ಆದ್ರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ರಾಹುಲ್ ಮತ್ತು ರೋಹಿತ್ ಜೋಡಿ 96 ರನ್ ಕಲೆ ಹಾಕಿತ್ತು. ಕೆ.ಎಲ್.ರಾಹುಲ್ ಬಳಿಕ ಕ್ರಿಸ್ ಗೆ ಬಂದ ಶ್ರೇಯಸ್ ಅಯ್ಯರ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು.

35ನೇ ಎಸೆತದಲ್ಲಿ ಅರ್ಧ ಶತಕಗಳಿಸುವ ಮೂಲಕ ರೋಹಿತ್ ಶರ್ಮಾ ಟಿಟ್ವೆಂಟಿಯ ತಮ್ಮ ವೃತ್ತಿ ಜೀವನದ 25ನೇ ಅರ್ಧ ಶತಕವನ್ನು ದಾಖಲಿಸಿದರು. ಇದುವರೆಗೂ ವಿರಾಟ್ ಕೊಹ್ಲಿ ಟಿಟ್ವೆಂಟಿಯಲ್ಲಿ 24 ಅರ್ಧ ಶತಕ ಗಳಿಸಿದ್ದಾರೆ. ಇದರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎಂಟನೇ ಸ್ಥಾನ ಪಡೆದರು.

ಕಾಲಿನ ಹಿಂಭಾಗದಲ್ಲಿ ರೋಹಿತ್ ಶರ್ಮಾರಿಗೆ ಆಟ ಮುಂದುವರಿಸಲಾಗಲಿಲ್ಲ. ಹಾಗಾಗಿ ನಿವೃತ್ತಿ ಘೋಷಿಸಿ ಪೆವಿಲಿಯನ್ ಗೆ ಮರಳಿದರು. ಈ ವೇಳೆ ರೋಹಿತ್ ಶರ್ಮಾ 41 ಎಸೆತದಲ್ಲಿ 60 ರನ್ ಗಳಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ ಗೆ ಜೊತೆಯಾದ ಶಿವಂ ದುಬೆ 6 ಎಸೆತದಲ್ಲಿ 5 ರನ್ ಗಳಿಸಿ ಬೇಗನೇ ಪೆವಿಲಿಯನ್ ಗೆ ಮರಳಿದರು. ಮನೀಶ್ ಪಾಂಡೆ ಔಟಾಗದೇ 11 ರನ್ ಮತ್ತು ಶ್ರೇಯಸ್ ಅಯ್ಯರ್ 33 ರನ್ ಗಳಿಸಿದ್ರು. ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 163 ರನ್ ಮೊತ್ತವನ್ನು ಕಲೆ ಹಾಕಿತು.

Share This Article
Leave a Comment

Leave a Reply

Your email address will not be published. Required fields are marked *