ಕ್ಯಾನ್ಬೆರಾ: ಟಿ20 ವಿಶ್ವಕಪ್ (T20 WorldCup) ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ (Endland) ವಿರುದ್ಧ ಭಾರತ ಹೀನಾಯವಾಗಿ ಸೋಲನುಭವಿಸಿದ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ. ಫೈನಲ್‌ನಲ್ಲಿ ಭಾರತವನ್ನು (India) ಎದುರಿಸಲು ಪಾಕಿಸ್ತಾನ (Pakistan) ಎದುರು ನೋಡುತ್ತಿತ್ತು. ಆದರೆ ಇನ್ಮುಂದೆ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
Embarrassing loss for India. Bowling badly exposed. No meet up in Melbourne unfortunately. pic.twitter.com/HG6ubq1Oi4
— Shoaib Akhtar (@shoaib100mph) November 10, 2022
Advertisement
ಈ ಕುರಿತು ಟ್ವಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಶೋಯೆಬ್ ಅಖ್ತರ್ (Shoaib Akhtar), ಟಿ20 ವಿಶ್ವಕಪ್‌ನಲ್ಲಿ ಯಜ್ವೇಂದ್ರ ಚಹಾಲ್ (Yuzvendra Chahal) ಒಂದೇ ಒಂದು ಪಂದ್ಯದಲ್ಲೂ ಏಕೆ ಆಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್ ಶರ್ಮಾ
Advertisement
Advertisement
ಭಾರತದ ಸೋಲು ಅತ್ಯಂತ ಮುಜುಗರ ತರಿಸಿದೆ. ಟೀಂ ಇಂಡಿಯಾ ಅತ್ಯಂತ ಭಯಂಕರವಾಗಿ ಆಡಿದರೂ ಸೋಲುವುದಕ್ಕೆ ಅರ್ಹವಾಗಿತ್ತು. ಫೈನಲ್‌ಗೆ ಬರಲು ಅರ್ಹರಾಗಿರಲಿಲ್ಲ. ಭಾರತ ತಂಡದಲ್ಲಿ ಎಕ್ಸ್‌ಪ್ರೆಸ್ ವೇಗಿ ಇರಲಿಲ್ಲ. ಒಂದು ಪಂದ್ಯದಲ್ಲೂ ಚಹಾಲ್ ಆಡಲಿಲ್ಲ. ಭಾರತದ ಬೌಲಿಂಗ್ ತುಂಬಾ ಕೆಟ್ಟದಾಗಿತ್ತು. ಆಕ್ರಮಣ ಶೀಲತೆಯ ಕೊರತೆಯೂ ಇತ್ತು ಎಂದು ಸೋಲಿಗೆ ಹಲವು ಕಾರಣಗಳನ್ನ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ
Advertisement
ಟಾಸ್ ಸೋತ ನಂತರ ಇದು ಕೆಟ್ಟ ದಿನವಾಗಿದೆ ಎಂದೆನ್ನಿಸಿತ್ತು. ಮೊದಲ ಐದು ಓವರ್‌ಗಳಲ್ಲಿ ಸುಮ್ಮನೆ ಗಾಳಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ಭಾರತ ಗೆಲ್ಲಲಾಗದಿದ್ದರೂ ಕನಿಷ್ಠ ಹೋರಾಡಬೇಕಿತ್ತು, ವಿಕೆಟ್ ಪಡೆಯಬೇಕಿತ್ತು, ಕೆಲವು ಬೌನ್ಸರ್‌ಗಳನ್ನು ನೀಡಬಹುದಾಗಿತ್ತು. ಆದರೆ ತಂಡದಲ್ಲಿ ಈ ರೀತಿಯ ಯಾವುದೇ ಆಕ್ರಮಣಶೀಲತೆ ಇರಲಿಲ್ಲ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಜವಾಯ್ತು ಅಖ್ತರ್ ಭವಿಷ್ಯ:
ಶೋಯೆಬ್ ಅಖ್ತರ್ ಇತ್ತೀಚೆಗಷ್ಟೇ, ಭಾರತ ಸೆಮಿ ಫೈನಲ್ ಹಂತದಲ್ಲಿ ಮನೆಗೆ ತೆರಳಿದೆ ಎಂದು ಭವಿಷ್ಯ ನುಡಿದಿದ್ದರು. ಭಾರತ ಕೂಡ ಸೆಮಿಫೈನಲ್ ಹಂತದಲ್ಲಿ ಮನೆಗೆ ಹಿಂದಿರುಗಲಿದೆ. ಟೀಂ ಇಂಡಿಯಾ ಅಷ್ಟು ಉತ್ತಮವಾಗಿಲ್ಲ ಎಂದು ಹೇಳಿದ್ದರು.
ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಸೆಮಿ ಕದನದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ 16 ಓವರ್‌ಗಳಲ್ಲೇ 170 ರನ್‌ಗಳಿಸಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.