OTTಯಲ್ಲೂ ದಾಖಲೆ ಬರೆದ ಇಂಡೋ-ಪಾಕ್ ಕದನ

Public TV
2 Min Read
OTT TEAM INDIA

ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 WorldCup) ರಣರೋಚಕ ಇಂಡೋ-ಪಾಕ್ ಕದನ ಒಟಿಟಿಯಲ್ಲೂ (OTT) ಹೊಸ ದಾಖಲೆ ಬರೆದಿದೆ. ಏಕಕಾಲಕ್ಕೆ 1.8 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.

ಭಾನುವಾರ ಸೂಪರ್‌ಸಂಡೇನಲ್ಲಿ ನಡೆದ ಭಾರತ-ಪಾಕಿಸ್ತಾನ (India – Pakistan) ವಿಶ್ವಕಪ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 20 ನಿಮಿಷ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಅಬ್ಬರ ಮೈ ಜುಮ್ಮೆನ್ನಿಸುವಂತಿತ್ತು. ನೋಬಾಲ್ ಗಿಫ್ಟ್‌ನಿಂದಾಗಿ ಕೊಹ್ಲಿ ಕ್ಲೀನ್‌ಬೌಲ್ಡ್ ಆದರೂ ಫ್ರೀ ಹಿಟ್‌ನಲ್ಲಿ 3 ರನ್ ಕದ್ದರು. ಈ ವೇಳೆ ಅತ್ಯಂತ ಹೆಚ್ಚಿನ ಜನರು ವೀಕ್ಷಣೆ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

Viratkohli 1

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ (HotStar) ಆರಂಭದಲ್ಲಿ 1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಕೊನೆಯ ಓವರ್ ತಲುಪುವಷ್ಟರಲ್ಲಿ 1.8 ಕೋಟಿಗೆ ದಾಟಿತ್ತು. ಇದಕ್ಕೂ ಮುನ್ನ ಕಳೆದ ಆಗಸ್ಟ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ 1.3 ಕೋಟಿ ಜನ ವೀಕ್ಷಣೆ ಮಾಡಿದ್ದು, ದಾಖಲೆಯಾಗಿತ್ತು. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರೋದು ಕೆಲವರಿಗೆ ಬೇಸರ ತರಿಸಿದೆ – ಕಲ್ಲಡ್ಕ ಪ್ರಭಾಕರ್ ಭಟ್

Kantara Virat Kohli

ಕ್ರೀಡಾಂಗಣದಲ್ಲಿ 90 ಸಾವಿರ ಮಂದಿ ವೀಕ್ಷಣೆ:
1 ಲಕ್ಷ ಆಸನದ ಸಾಮರ್ಥ್ಯ ಹೊಂದಿರುವ ವಿಶ್ವದ 2ನೇ ಅತಿದೊಡ್ಡ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನದ ವೇಳೆ 90,923 ಮಂದಿ ವೀಕ್ಷಕರು ಉಪಸ್ಥಿತರಿದ್ದರು. 2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ (Australia -NewZealand) ನಡುವಿನ ಪಂದ್ಯವನ್ನು 90,013 ಮಂದಿ ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಬಾರಿ ಭಾರತ ಮತ್ತು ಪಾಕಿಸ್ತಾನದ ವೀಕ್ಷರ ಸಂಖ್ಯೆ ಹೊಸ ದಾಖಲೆ ಬರೆದಿದೆ.

VIRAT KOHLI 4

ಮೆಲ್ಬರ್ನ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಇಂಡೋ ಪಾಕ್ ಕದನದಲ್ಲಿ 20 ಓವರ್‌ಗಳಲ್ಲಿ ಪಾಕ್ 159 ರನ್ ಗಳಿಸಿದ ಪಾಕಿಸ್ತಾನ, ಭಾರತಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *