ಇಂದು ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯಾ-ಪಾಕಿಸ್ತಾನ (Pakistan) ಪಂದ್ಯವನ್ನು (Cricket) ವೀಕ್ಷಿಸುವುದಕ್ಕಾಗಿ ಮತ್ತು ಟೀಮ್ ಇಂಡಿಯಾವನ್ನು (India) ಹುರುದುಂಬಿಸುವುದಕ್ಕಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಕ್ರಿಕೆಟ್ ಮೈದಾನದಲ್ಲಿ ಇರಲಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಇಂಡಿಯಾ-ಪಾಕಿಸ್ತಾನ ಮ್ಯಾಚ್ ಜೊತೆಯಲಿ ನಾನು. ಇದ್ಕಿಂತ ಹಬ್ಬಾ ಬೇಕಾ? ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
ವಿಶ್ವಕಪ್ ಟೂರ್ನಿಯ ರೋಚಕ ಇಂಡೋ-ಪಾಕ್ ಸಮರಕ್ಕೆ ಕ್ಷಣಗಣನೆ ಬಾಕಿಯಿದೆ. ಮಧ್ಯಾಹ್ನ 2 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯ ನೋಡಲು ಮೈದಾನಕ್ಕೆ ಜನಸಾಗರವೇ ಹರಿದು ಬಂದಿದೆ. ಎಲ್ಲ ಟಿಕೆಟ್ಗಳು ಕೂಡ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಕೆಲವರು ಸ್ಟೇಡಿಯಂನ ಹೊರ ಭಾಗದಲ್ಲಿ ಭಾರತ ತಂಡದ ಜೆರ್ಸಿಯನ್ನು ಹಾಕಿ ಸಂಭ್ರಮಾಚರಣೆ ಮಾಡುವ ಮೂಲಕ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
Advertisement
Advertisement
ಇನ್ನೇನು ಕೆಲವೇ ಗಂಟೆಗಳಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಿವುಡ್ ಗಾಯಕರಾದ ಶಂಕರ್ ಮಹಾದೇವನ್, ಸುಖ್ವಿಂದರ್ ಸಿಂಗ್, ಅರ್ಜಿತ್ ಸಿಂಗ್ ಸಂಗೀತ ಸುಧೆ ಹರಿಸಲಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಹಲವು ಮಾಜಿ ಆಟಗಾರರು ಈ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದಾರೆ.
Advertisement
ಟೀಂ ಇಂಡಿಯಾ ಗೆಲುವಿಗೆ ಹೋಮ, ಹವನ:
ಪ್ರತಿಬಾರಿ ಭಾರತದ ಗೆಲುವಿಗಾಗಿ ದೇಶದ ಹಲವು ಕಡೆಗಳಲ್ಲಿ ಅಭಿಮಾನಿಗಳು ಪೂಜೆ ಮತ್ತು ಪ್ರಾರ್ಥನೆ ನಡೆಸಿದ್ದಾರೆ. ಪಂದ್ಯಕ್ಕೆ ಭಾರೀ ಕಟ್ಟೆಚ್ಚರ ವಹಿಸಿದ್ದು, ಗುಜರಾತ್ ಪೊಲೀಸ್, ಎನ್ಎಸ್ಜಿ, ಆರ್‌ಎಎಫ್, ಗೃಹರಕ್ಷಣಾ ಪಡೆ ಸಹಿತ ಕ್ರೀಡಾಂಗಣದ ಸುತ್ತ ವಿವಿಧ ಭದ್ರತಾ ಏಜೆನ್ಸಿಗಳಿಂದ ಒಟ್ಟು 11 ಸಾವಿರ ರಕ್ಷಣಾ ಸಿಬ್ಬಂದಿಯನ್ನು ಬಿಗಿಭದ್ರತೆಗಾಗಿ ನಿಯೋಜಿಸಲಾಗಿದೆ.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.
Web Stories