– ವಾಜಪೇಯಿ ಪ್ರಧಾನಿಯಾಗಿದ್ದಾಗ ಭಾರತ-ಪಾಕ್ ನಡುವೆ ಮೊದಲ ಬಸ್ ಓಡಿಸಿದ್ದ ಡ್ರೈವರ್
– ಉಡುಪಿಯ ಕಾರ್ಕಳದ ತಂಡಕ್ಕೆ ವಿಭಿನ್ನ ಅನುಭವ
ಉಡುಪಿ: ಉತ್ತರ ಭಾರತದ ಪ್ರಯಾಗ್‌ರಾಜ್‌ಗೆ (Prayagraj) ದೇಶ-ವಿದೇಶದ ಜನ ಪವಿತ್ರ ಸ್ನಾನಕ್ಕೆ ಹರಿದು ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದು ಪುಳಕಿತರಾಗುತ್ತಿದ್ದಾರೆ. ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಕುಂಭಮೇಳಕ್ಕೆ ತೆರಳಿದ ಗೆಳೆಯರ ಬಳಗಕ್ಕೆ ವಿಶೇಷ ಸಾರಥಿ ಸಿಕ್ಕಿದ್ದಾರೆ.
Advertisement
ಕಾರ್ಕಳದಿಂದ (Karkala) ಉತ್ತರಪ್ರದೇಶಕ್ಕೆ ಹೋದ ತಂಡವನ್ನು 65 ವರ್ಷದ ಸುನೀಲ್ ಕುಮಾರ್ ಸಿಂಗ್, ತನ್ನ ಬಸ್‌ನಲ್ಲಿ ಸಂಗಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಸುನೀಲ್ ಕುಮಾರ್ ಸಿಂಗ್ ಬೇರೆ ಯಾರು ಅಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಓಡಾಡುತ್ತಿದ್ದ ಬಸ್ಸಿನ ಚಾಲಕ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ
Advertisement
Advertisement
1999 ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ವಿಶೇಷ ಬಸ್ ಓಡುತ್ತಿತ್ತು. ಆ ಪ್ರಥಮ ಬಸ್ ಓಡಿಸಿದರು ಸುನೀಲ್ ಕುಮಾರ್ ಸಿಂಗ್. ಡೆಲ್ಲಿ ಲಾಹೋರ್ ಡೆಲ್ಲಿ ನಡುವೆ 2001 ರ ವರೆಗೆ ಓಡಾಡಿ, ಆಮೇಲೆ ಎರಡು ವರ್ಷ ಬಸ್ ಸ್ಥಗಿತವಾಗಿತ್ತು. ಮತ್ತೆ 2003 ರಿಂದ 2019 ರ ವರೆಗೆ ಅಟಾರಿ ಮತ್ತು ವಾಘಾ ಗಡಿ ಮೂಲಕ ಎರಡು ದೇಶಗಳ ನಡುವೆ ಬಸ್ ಓಡಾಡಿತ್ತು.
Advertisement
ಪಾಕಿಸ್ತಾನ ಸರ್ಕಾರ ಜಮ್ಮು-ಕಾಶ್ಮೀರ ಕುರಿತಾದ ವಿವಾದ ಹಿನ್ನೆಲೆಯಲ್ಲಿ ಈ ಬಸ್ ಓಡಾಟವನ್ನು ರದ್ದು ಮಾಡಿತ್ತು. 2019 ರ ನಂತರ ಸುನೀಲ್ ಸಿಂಗ್ ಡೆಲ್ಲಿ-ಉತ್ತರಪ್ರದೇಶದಲ್ಲಿ ಖಾಸಗಿ ಬಸ್ಸನ್ನು ಓಡಿಸುತ್ತಿದ್ದಾರೆ. ಸುಮಾರು 700 ಕಿಲೋಮೀಟರ್ ರಸ್ತೆಯನ್ನು ಏಕಾಂಗಿಯಾಗಿ ಓಡಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಭಾರತ-ಪಾಕಿಸ್ತಾನದ ನಡುವಿನ ಬಸ್ ಓಡಾಟದ ಕಥೆಗಳನ್ನು ಸುನೀಲ್ ಸಿಂಗ್ ಪ್ರಯಾಣಿಕರ ಜೊತೆ ಹಂಚಿಕೊಂಡಿದ್ದಾರೆ. ಪ್ರಯಾಗದ ಪ್ರಯಾಣದ ನಡುವೆ ಈ ಘಟನೆ ಎಲ್ಲರ ನೆನಪಿನಲ್ಲುಳಿಯುತ್ತೆ ಎನ್ನುತ್ತಿದೆ ಟೀಂ ಕಾರ್ಕಳ. ಇದನ್ನೂ ಓದಿ: ಮುರಿದ ಸೀಟ್ ನೀಡಿ ಮೋಸ ಮಾಡಿದ್ದೀರಿ: ಏರ್ ಇಂಡಿಯಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಕೆಂಡಾಮಂಡಲ