ನವದೆಹಲಿ: ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು (Population) ಹೊಂದಿದ್ದ ಚೀನಾವನ್ನು (China) ಭಾರತ (India) ಹಿಂದಿಕ್ಕಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ.
ವಿಶ್ವಸಂಸ್ಥೆಯ ಡ್ಯಾಶ್‌ಬೋರ್ಡ್ ಪ್ರಕಾರ ಭಾರತದ ಜನಸಂಖ್ಯೆಯ ಶೇ.25 ರಷ್ಟು ಜನರು 0-14 ವರ್ಷ ವಯಸ್ಸಿನ ನಡುವಿನವರಾಗಿದ್ದು ಶೇ.18 ರಷ್ಟು ಜನರು 10-19 ವರ್ಷ ವಯಸ್ಸಿನ ವ್ಯಾಪ್ತಿಯಲ್ಲಿದ್ದಾರೆ. 10-24 ವರ್ಷದ ನಡುವಿನ ಜನರು ಶೇ.26 ರಷ್ಟಿದ್ದು, 15-64 ವರ್ಷ ವಯಸ್ಸಿನವರು ಶೇ.68 ರಷ್ಟು ಇದ್ದಾರೆ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ಶೇ.7 ರಷ್ಟು ಇದ್ದಾರೆ.
Advertisement
Advertisement
ತಜ್ಞರ ಪ್ರಕಾರ ಕೇರಳ ಮತ್ತು ಪಂಜಾಬ್‌ನಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ವಿವಿಧ ಏಜೆನ್ಸಿಗಳು ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಭಾರತದ ಜನಸಂಖ್ಯೆಯು 3 ದಶಕಗಳ ವರೆಗೆ ನಿರಂತರವಾಗಿ ಹೆಚ್ಚಲಿದ್ದು 165 ಕೋಟಿಗೆ ತಲುಪಲಿದೆ. ಆ ಬಳಿಕ ಅದು ಇಳಿಮುಖವಾಗಲಿದೆ. ಇದನ್ನೂ ಓದಿ: ಏ.21, 22ರಂದು ದಾವಣಗೆರೆ, ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯಲ್ಲಿರುವ (UNFPA) ಭಾರತದ ಪ್ರತಿನಿಧಿ ಆಂಡ್ರಿಯಾ ವೊಜ್ನರ್, ಭಾರತದ 1.4 ಶತಕೋಟಿ ಜನರನ್ನು 1.4 ಶತಕೋಟಿ ಅವಕಾಶಗಳಾಗಿ ನೋಡಬೇಕು ಎಂದು ಹೇಳಿದ್ದಾರೆ. ಭಾರತ 254 ಮಿಲಿಯನ್ ಯುವಕರು (15-24 ವರ್ಷದವರು) ಅತಿದೊಡ್ಡ ಯುವ ಸಮೂಹವನ್ನು ಹೊಂದಿದ್ದು ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.
Advertisement
ಮಹಿಳೆಯರು ಮತ್ತು ಯುವತಿಯರು ಸಮಾನ ಶಿಕ್ಷಣ ಮತ್ತು ಕೌಶಲ್ಯ ನಿರ್ಮಾಣ ಅವಕಾಶಗಳು, ತಂತ್ರಜ್ಞಾನ ಮತ್ತು ಡಿಜಿಟಲ್ ಆವಿಷ್ಕಾರಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಮುಖ್ಯವಾಗಿ ತಮ್ಮ ಸಂತಾನೋತ್ಪತ್ತಿ ಆಯ್ಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಪಥವು ಮುಂದೆ ಸಾಗಬಹುದು ಎಂದು ಯುಎನ್ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ವೀರ್ಯ ಸ್ಖಲನವಾಗಿರಲೇ ಬೇಕಿಲ್ಲ – ಆಂಧ್ರ ಹೈಕೋರ್ಟ್