ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್‌ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್‌!

Public TV
1 Min Read
PSL 1

– ಪಾಕ್‌ ತೊರೆದ ಹಾಕ್‌ಐ ತಂತ್ರಜ್ಞರು
– ಮೇ 17 ರಿಂದ ಟಿ-20 ಲೀಗ್‌ ಆರಂಭ

ಕರಾಚಿ: ಭಾರತದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಿಂದ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್‌ ಲೀಗ್‌ (PSL) ಮೇ 17 ರಿಂದ ಪುನಾರಂಭಗೊಂಡಿದ್ದರೂ ಪಂದ್ಯಗಳಲ್ಲಿ ತೀರ್ಪು ಮರು ಪರಿಶೀಲನಾ ನಿಯಮವನ್ನು(DRS) ಕೈಬಿಟ್ಟಿದೆ.

ಡಿಆರ್‌ಎಸ್‌ಗೆ ಬೇಕಾಗಿರುವ ಹಾಕ್‌ಐ (Hawk-Eye) ಬಳಸಲು ಗೊತ್ತಿರುವ ತಂತ್ರಜ್ಞರು ಪಾಕಿಸ್ತಾನದಲ್ಲಿ (Pakistan) ಇಲ್ಲದ ಕಾರಣ ಈ ನಿಯಮನ್ನೇ ಕೈಬಿಡಲಾಗಿದೆ. ಟೂರ್ನಿ ಸ್ಥಗಿತಗೊಂಡ ಕಾರಣ ಹಾಕ್‌ಐ ತಂಡದ ಸದಸ್ಯರು ತಮ್ಮ ದೇಶಕ್ಕೆ ಮರಳಿದ್ದಾರೆ.

ಪಿಎಸ್‌ಎಲ್‌ ಆರಂಭಗೊಂಡಿದ್ದರೂ ಹಾಕ್‌ಐ ತಂತ್ರಜ್ಞರು ಪಾಕಿಸ್ತಾನಕ್ಕೆ ಮರಳಲು ಹಿಂದೇಟು ಹಾಕಿದ್ದಾರೆ. ಪಾಕ್‌ನಲ್ಲಿ ಬೇರೆ ಯಾರಿಗೂ ಡಿಆರ್‌ಎಸ್ ಬಳಕೆಯ ಬಗ್ಗೆ ತಿಳಿಯದ ಕಾರಣ ಈ ನಿಯಮವನ್ನೇ ಟೂರ್ನಿಯಿಂದ ಕೈಬಿಡಲಾಗಿದೆ. ಹೀಗಾಗಿ ಅಂಪೈರ್ ನಿರ್ಧಾರವೇ ಅಂತಿಮವಾಗಿದ್ದು ಮರು ಪರಿಶೀಲನೆಗೆ ಆಟಗಾರರಿಗೆ ಅವಕಾಶವಿಲ್ಲದಂತಾಗಿದೆ.  ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

DRS cricket hawk eye

ಪಿಎಸ್ಎಲ್‌ನ ಡಿಆರ್‌ಎಸ್‌ ಮತ್ತು ಹಾಕ್-ಐ ತಂತ್ರಜ್ಞಾನಗಳನ್ನು ನಿರ್ವಹಿಸುತ್ತಿದ್ದವರ ಪೈಕಿ ಹೆಚ್ಚಿನ ತಂತ್ರಜ್ಞರು ಭಾರತದವರೇ ಆಗಿದ್ದಾರೆ ಎಂದು ವರದಿಯಾಗಿದೆ. ಪಿಎಸ್‌ಎಲ್‌ನ ಕೊನೆಯ ಕೆಲವು ಪಂದ್ಯಗಳು ಡಿಆರ್‌ಎಸ್‌ ಇಲ್ಲದೇ ಪೂರ್ಣಗೊಳ್ಳುವ ಕಾರಣ ತಂಡಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನೂ ಓದಿ: ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್‌

ಪುನರಾರಂಭದ ನಂತರದ ಮೊದಲ ಐದು ಪಂದ್ಯಗಳು ಯಾವುದೇ ವಿವಾದ ಇಲ್ಲದೇ ನಡೆದಿದೆ. ಪಿಎಸ್‌ಎಲ್ ಅಥವಾ ಪಿಸಿಬಿ ಡಿಆರ್‌ಎಸ್‌ ಕೈಬಿಟ್ಟ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಭಾರತದ ಐಪಿಎಲ್‌ಗೆ ಪ್ರತಿಯಾಗಿ ಪಾಕಿಸ್ತಾನ ಪಿಎಸ್‌ಎಲ್‌ ಅನ್ನು 2017 ರಿಂದ ಆರಂಭಿಸಿದೆ. 2017 ರಿಂದ ಮೇ 7 ರವರೆಗೂ ಡಿಆರ್‌ಎಸ್‌ ನಿಯಮ ಜಾರಿಯಲ್ಲಿತ್ತು.

Share This Article