ಬೆಂಗಳೂರು: ಚಂದ್ರಯಾನ- 3 (Chandrayaan-3) ಮಿಷನ್ ಸಕ್ಸಸ್ ಆಗಿದ್ದು ವಿಕ್ರಮ್ ಲ್ಯಾಂಡರ್ (Vikram Lander) ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಯಶಸ್ವಿಯಾಗಿ ಕಾಲಿಟ್ಟಿದೆ. 6 ವೈಜ್ಞಾನಿಕ ಪೇಲೋಡ್‌ಗಳನ್ನು (Scientific Payloads) ಹೊತ್ತು ತಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ನಡೆದಾಡಲು ಶುರು ಮಾಡಿದೆ.
ಲ್ಯಾಂಡರ್ ಹಾಗೂ ರೋವರ್ ಜೀವಿತಾವಧಿ ಕೇವಲ 1 ಚಂದ್ರನ ದಿನ (ಭೂಮಿಯ 14 ದಿನಗಳು) ಮಾತ್ರ. ವಿಕ್ರಮ್ ಮತ್ತು ಪ್ರಗ್ಯಾನ್‌ಗೆ (Pragyan Rover) ಅಲ್ಲಿ ಅಧ್ಯಯನ ನಡೆಸಲು ಇರುವ ಸಮಯವಿದು. ಅಷ್ಟರ ಒಳಗೆ ಈ ಎರಡೂ ತಂತ್ರಜ್ಞಾನಗಳು ವಿಜ್ಞಾನಿಗಳ ಕುತೂಹಲ ತಣಿಸುವ ಮಹತ್ವದ ಅಂಶಗಳನ್ನ ಭೂಮಿಗೆ ರವಾನಿಸಬೇಕಿದೆ. ಏಕೆಂದರೆ 14 ದಿನಗಳು ಕಳೆದ ಬಳಿಕ ಕಾರ್ಯಾಚರಣೆ ನಡೆಸಲು ಅಲ್ಲಿ ಬೇಕಾದ ಸೌರಶಕ್ತಿ ಸಿಗುವುದಿಲ್ಲ. ಹಾಗಾದರೆ 14 ದಿನಗಳ ನಂತರ ಇವೆರಡ ಕಥೆ ಏನು ಎಂಬುದೇ ಪ್ರಶ್ನೆ.
Advertisement
Advertisement
ಚಂದ್ರನಲ್ಲಿ 14 ದಿನಗಳು ಹಗಲು, 14 ದಿನಗಳು ಇರುಳು ಕವಿದಿರುತ್ತದೆ. ಇರುಳಿನ ಸಂದರ್ಭದಲ್ಲಿ ಸೌರ ಶಕ್ತಿ ಇಲ್ಲದ ಕಾರಣ ಅವು (ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್) ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಮುಖ್ಯವಾಗಿ ಕತ್ತಲಿನಲ್ಲಿ ಚಂದ್ರನ ಮೇಲ್ಮೈ ತಾಪಮಾನ -208 ಡಿಗ್ರಿ ಫ್ಯಾರನ್ ಹೀಟ್ ಅಥವಾ -133 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಇಷ್ಟು ಚಳಿಯ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಾಮರ್ಥ್ಯ ಲ್ಯಾಂಡರ್, ರೋವರ್ ಹಾಗೂ ಅವುಗಳಲ್ಲಿನ ಪೇಲೋಡ್‌ಗಳಲ್ಲಿ ಇರುವುದಿಲ್ಲ. ಹೀಗಾಗಿ ಕಾರ್ಯಾಚರಣೆ ವೇಳೆ ಅವು ಸಾಕಷ್ಟು ಸಮಸ್ಯೆ ಎದುರಿಸಬಹುದು. ಈ ಅವಧಿಯಲ್ಲಿ ಕೂಡ ಚಂದ್ರನ ಮೇಲಿನ ಲ್ಯಾಂಡರ್ ಜೊತೆ ರೋವರ್ ಸಂಪರ್ಕದಲ್ಲಿ ಇರುತ್ತದೆ. ಅದರ ಮೂಲಕ ಬೆಂಗಳೂರಿನಲ್ಲಿರುವ ಇಸ್ರೋದ ಮಿಷನ್ ಕಮಾಂಡ್ ಕೇಂದ್ರಕ್ಕೆ ಮಾಹಿತಿಗಳು ರವಾನೆಯಾಗುತ್ತದೆ. ಈ ವೇಳೆಯಲ್ಲಿ ರೋವರ್ ಜೊತೆಗೆ ಇಸ್ರೋ ನೇರ ಸಂಪರ್ಕ ಹೊಂದಿರುವುದಿಲ್ಲ.
Advertisement
Advertisement
14 ದಿನಗಳ ನಂತರ ಮುಂದೇನು?
ಚಂದ್ರನ ಕತ್ತಲೆಯ ಅವಧಿ ಮುಗಿದ ಬಳಿಕ ಅಥವಾ ಅಮಾವಾಸ್ಯೆ ಅವಧಿ ಕಳೆದ ಮೇಲೆ ಮತ್ತೆ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ. ಆಗ ರೋವರ್ ಹಾಗೂ ಲ್ಯಾಂಡರ್ ಪುನಃ ಸಕ್ರಿಯವಾಗುತ್ತವೆಯೇ? ಅದರ ಸಾಧ್ಯತೆ ತೀರಾ ಕಡಿಮೆಯಾದರೂ ಅಲ್ಲಗಳೆಯಲಾಗದು. ಹಾಗೊಮ್ಮೆ ರೋವರ್ ಮತ್ತು ಲ್ಯಾಂಡರ್ ಸಕ್ರಿಯವಾಗಿದ್ದರೆ ಅದು ವಿಜ್ಞಾನದ ಅದೃಷ್ಟವಾಗಿರಲಿದೆ. ಅದರ ಯಂತ್ರಗಳು 14 ದಿನಗಳ ವಿಪರೀತ ಚಳಿ ಸಹಿಸಿಕೊಂಡು, ಬಿಸಿಲು ಬಿದ್ದಾಗ ಕಾರ್ಯಾಚರಣೆ ನಡೆಸಿದರೆ, ಮತ್ತೆ 14 ದಿನಗಳ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಇದನ್ನೂ ಓದಿ: ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್ ಪ್ರಜೆ ವ್ಯಂಗ್ಯ
ಯೋಜನೆ ಮುಗಿದ ಬಳಿಕ ಏನು?
ಚಂದ್ರನಲ್ಲಿನ ತಮ್ಮ ಹೊಣೆಗಾರಿಕೆ ಪೂರ್ಣಗೊಳಿಸಿದ ನಂತರ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ವಾಪಸ್ ಭೂಮಿಗೆ ಬರುವುದಿಲ್ಲ. ಚಂದ್ರಲೋಕಕ್ಕೆ ತೆರಳಿದ ಅವುಗಳ ಜೀವನ ಅಲ್ಲಿಯೇ ಅಂತ್ಯಗೊಳ್ಳಲಿವೆ. ತಮ್ಮ ಪ್ರಯೋಗಗಳನ್ನು ಮುಗಿಸಿದ ರೋವರ್ ಹಾಗೂ ಲ್ಯಾಂಡರ್ ಚಂದಮಾಮನಲ್ಲಿ ಪಳೆಯುಳಿಕೆಗಳಾಗಿ ಉಳಿಯಲಿವೆ. ಮುಂದೊಂದು ದಿನ ಚಂದ್ರನ ಅಂಗಳಕ್ಕೆ ಮಾನವ ಕಾಲಿಟ್ಟಾಗ ಚಂದ್ರನ ಮೇಲೆ ಆಟಿಕೆಗಳಂತೆ ಕಾಣುವ ಈ ಲ್ಯಾಂಡರ್ ಮತ್ತು ರೋವರ್ ಸಿಗಬಹುದು. ಚಂದ್ರಯಾನ-2ರ ಪುಡಿಯಾದ ಲ್ಯಾಂಡರ್‌ನ ಅವಶೇಷಗಳೂ ಕಾಣಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್ ರೋವರ್ – ವಿಕ್ರಮ್ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?
ದಕ್ಷಿಣ ಧ್ರುವ ಆಯ್ಕೆ ಮಾಡಿಕೊಂಡಿದ್ದೇಕೆ?
ಭಾರತ ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಗ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಗೆ ಸಾಧಿಸಿದೆ. ದಕ್ಷಿಣ ಧ್ರುವ ಪ್ರದೇಶವು ನಾಸಾದ ಸಿಬ್ಬಂದಿ ಅಪೊಲೊ ಲ್ಯಾಂಡಿಂಗ್‌ಗಳು ಸೇರಿದಂತೆ ಇತರ ಕಾರ್ಯಾಚರಣೆಗಳಿಂದ ಗುರಿಯಾಗಿರುವ ಸಮಭಾಜಕ ಪ್ರದೇಶದಿಂದ ದೂರವಿದೆ. ಇಲ್ಲಿನ ಪ್ರದೇಶ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ಕೂಡಿರುತ್ತದೆ. ಚಂದ್ರಯಾನ-3 ಮಿಷನ್‌ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಅಧ್ಯಯನವನ್ನ ಮುಂದುವರಿಸಬಹುದು. ಜೊತೆಗೆ ಚಂದ್ರನ ಮೇಲ್ಮೈನಲ್ಲಿರುವ ಇತರೇ ಅತ್ಯಮೂಲ್ಯ ಸಂಪನ್ಮೂಲಗಳ ಅಧ್ಯಯನ ಗುರಿ ಹೊಂದಿದೆ. ಅದಕ್ಕಾಗಿ ಭಾರತ ದಕ್ಷಿಣ ಧ್ರುವವನ್ನ ಆಯ್ಕೆ ಮಾಡಿಕೊಂಡಿದೆ.
ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 41 ದಿನಗಳ ಸುದೀರ್ಘ ಪ್ರಯಾಣದ ನಂತರ ವಿಕ್ರಮ್ ಲ್ಯಾಂಡರ್ ಚಂದ್ರಯನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿತು.
Web Stories