ನವದೆಹಲಿ: ನಾವು ತಟಸ್ಥವಾಗಿಲ್ಲ, ಶಾಂತಿ ಕಡೆ ಇದ್ದೇವೆ ಎಂದು ಯುದ್ಧಪೀಡಿತ ಉಕ್ರೇನ್‌ಗೆ (Ukraine) ಐತಿಹಾಸಿಕ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದ್ದಾರೆ.
ನಾವು (ಭಾರತ) ತಟಸ್ಥರಲ್ಲ. ಮೊದಲಿನಿಂದಲೂ ನಾವು ಶಾಂತಿ ಸ್ಥಾಪನೆಗೆ ಕರೆ ನೀಡಿದ್ದೇವೆ. ನಾವು ಬುದ್ಧನ ಭೂಮಿಯಿಂದ ಬಂದಿದ್ದೇವೆ. ಅಲ್ಲಿ ಯುದ್ಧಕ್ಕೆ ಸ್ಥಳವಿಲ್ಲ. ನಾವು ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮ ಗಾಂಧಿಯವರ ಭೂಮಿಯಿಂದ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!
Advertisement
Advertisement
ಕೆಲವು ಸಮಯದ ಹಿಂದೆ ನಾನು ಸಮರ್ಕಂಡ್‌ನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ, ಇದು ಯುದ್ಧದ ಯುಗವಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಕಳೆದ ತಿಂಗಳು ನಾನು ರಷ್ಯಾಕ್ಕೆ ಹೋದಾಗ, ಯಾವುದೇ ಸಮಸ್ಯೆಗೆ ಪರಿಹಾರವು ಯುದ್ಧಭೂಮಿಯಲ್ಲಿ ಎಂದಿಗೂ ಸಿಗುವುದಿಲ್ಲ ಎಂದು ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದೆ ಎಂದು ತಿಳಿಸಿದ್ದಾರೆ.
Advertisement
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಐರೋಪ್ಯ ರಾಷ್ಟ್ರದ ಸ್ವಾತಂತ್ರ್ಯದ ನಂತರ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿ ಐತಿಹಾಸಿಕವಾಗಿದೆ. ಭಾರತ ಮತ್ತು ಉಕ್ರೇನ್ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ನಾಲ್ಕು ದಾಖಲೆಗಳಿಗೆ ಸಹಿ ಹಾಕಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಂಸ್ಕೃತಿಯಲ್ಲಿ ಮಾನವೀಯತೆಯೇ ಮೊದಲು, ಯುದ್ಧದ ಸಮಯವಲ್ಲ: ಪೋಲೆಂಡ್‍ನಲ್ಲಿ ಮೋದಿ ಶಾಂತಿ ಮಂತ್ರ
Advertisement
1991 ರಲ್ಲಿ ರಷ್ಯಾದ ಭಾಗವಾಗಿದ್ದ ರಾಜ್ಯ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ವಿಶೇಷ ರೈಲಿನಲ್ಲಿ ಕೈವ್‌ಗೆ ಭೇಟಿ ನೀಡಿದ್ದರು.