ನವದೆಹಲಿ: ಭಾರತ 1947ರಲ್ಲಿ ಹುಟ್ಟಲಿಲ್ಲ ಎಂದು ಹಿರಿಯ ಸಿಖ್ ನಾಯಕರೊಂದಿಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ ಪ್ರಧಾನಿ ಮೋದಿ, 1947ರಲ್ಲಿ ಈ ದೇಶ ಹುಟ್ಟಲಿಲ್ಲ. ನಮ್ಮ ಗುರುಗಳು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವು ತುಂಬಾ ದಬ್ಬಾಳಿಕೆ ಅನುಭವಿಸಿದ್ದೇವೆ. ಆ ಸಮಯದಲ್ಲಿ ನಾನೂ ಭೂಗತನಾಗಿದ್ದೆ. ನಾನು ಅಡಗಿಕೊಳ್ಳಲು ಸಿಖ್ ವೇಷ ಧರಿಸುತ್ತಿದ್ದೆ. ನಾನು ಪಗ್ಡಿ ಧರಿಸುತ್ತಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್ ಭಯೋತ್ಪಾದಕ: ಅರವಿಂದ್ ಕೇಜ್ರಿವಾಲ್
Advertisement
Advertisement
1947ರ ವಿಭಜನೆಯ ಸಂದರ್ಭದಲ್ಲಿ ಸಿಖ್ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್ ಅನ್ನು ಭಾರತದಲ್ಲಿಯೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕರ್ತಾರ್‌ಪುರ ಸಾಹಿಬ್ ಪಾಕಿಸ್ತಾನದಲ್ಲಿದ್ದು, ಪಂಜಾಬ್‌ನಿಂದ ಸುಮಾರು ಆರು ಕಿ.ಮೀ. ದೂರದಲ್ಲಿದೆ ಎಂದರು.
Advertisement
ਅੱਜ ਸਵੇਰੇ ਸੰਤ ਸਮਾਜ ਤੇ ਸਿੱਖ ਭਾਈਚਾਰੇ ਦੀਆਂ ਉੱਘੀਆਂ ਸ਼ਖਸੀਅਤਾਂ ਨਾਲ ਮੁਲਾਕਾਤ ਕੀਤੀ। ਇਹ ਸਾਰੇ ਉਹ ਪਤਵੰਤੇ ਸਨ ਜਿਨ੍ਹਾਂ ਨੇ ਪੂਰੇ ਦੇਸ਼ ਤੇ ਦੁਨੀਆਂ ਵਿੱਚ ਸਿੱਖ ਭਾਈਚਾਰੇ ਤੇ ਸੱਭਿਆਚਾਰ ਦਾ ਪਾਸਾਰ ਕੀਤਾ ਤੇ ਮਨੁੱਖਤਾ ਦੀ ਸੇਵਾ ਕੀਤੀ। pic.twitter.com/ek6SzZvDWj
— Narendra Modi (@narendramodi) February 18, 2022
Advertisement
ಗುರು ಗ್ರಂಥ ಸಾಹಿಬ್ ಅನ್ನು ಅಫ್ಘಾನಿಸ್ತಾನದಿಂದ ಮರಳಿ ತರಬೇಕು. ನಾವು ಅದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅದಕ್ಕಾಗಿ ವಿಶೇಷ ವಿಮಾನ ಒದಗಿಸಿದ್ದೇವೆ. ಅದನ್ನು ಗೌರವದಿಂದ ವಾಪಸ್ ತರಿಸಿಕೊಳ್ಳಲು ನಾನು ಸಚಿವರಿಗೆ ಹೇಳಿದ್ದೇನೆ. ಅದು ನಮ್ಮ ಜೀವನದ ಅಮೂಲ್ಯವಾಗಿದೆ ಗುರು ಗೋಬಿಂದ್ ಸಿಂಗ್ ಅವರು ಗುಜರಾತ್‌ನವರಾಗಿದ್ದರಿಂದ ನಾನು ನಿಮ್ಮ ರಕ್ತ ಸಂಬಂಧಿಯೇ ಆಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್‍ಜಿತ್ ಸಿಂಗ್ ಚನ್ನಿ
ಇದೇ ಫೆ.20ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರ ಬೀಳಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಎಎಪಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ.