ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಅದು ಅಂದಾಜಿಸಿದೆ.
Advertisement
ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ಅದು ಅಂದಾಜಿಸಿದೆ.
Advertisement
ರಾಜಕೀಯ, ಭೌಗೋಳಿಕ, ಸಾಂಸ್ಥಿಕ ಕ್ಷೇತ್ರಗಳಿಂದಾಗಿ, ಭಾರತದ ಜೊತೆ ಇಂಡೋನೇಷ್ಯಾ, ವಿಯೆಟ್ನಾಂ, ಟರ್ಕಿ, ಉಗಾಂಡ, ಬಲ್ಗೇರಿಯಾ ದೇಶಗಳ ಆರ್ಥಿಕತೆಗಳು ವೇಗವಾಗಿ ಬೆಳವಣಿಗೆಯಾಗಲಿದೆ ಎಂದು ಸಿಐಡಿ ತಿಳಿಸಿದೆ.
Advertisement
Advertisement