-ಭಾವನಾತ್ಮಕವಾದ್ರೆ ಆಡೋದು ಕಷ್ಟ
ನವದೆಹಲಿ: ಬದ್ಧ ವೈರಿಗಳನ್ನು ಬಗ್ಗುಬಡಿದು ವಿಶ್ವಕಪ್‍ನಲ್ಲಿ ಭಾರತ ಮೂರನೇ ಪಂದ್ಯವನ್ನು ಗೆದ್ದು ಬೀಗಿದೆ. ಈ ಸಮಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನಾವು ಭಾವನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾನುವಾರ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನ ಸೋಲಿನ ಪ್ರತೀಕಾರವನ್ನು ತೀರಿಸಿಕೊಂಡಿದೆ. ಒಟ್ಟು ವಿಶ್ವಕಪ್‍ನಲ್ಲಿ ಆಡಿದ 7 ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಸೋಲುಣಿಸಿದೆ.
Advertisement
Advertisement
ಈ ಜಯದ ನಂತರ ಮಾತನಾಡಿರುವ ವಿರಾಟ್ ಕೊಹ್ಲಿ, ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ವೃತ್ತಿಪರವಾಗಿ ತೆಗೆದುಕೊಂಡಿದ್ದವು. ಚಾಂಪಿಯನ್ಸ್ ಟ್ರೋಫಿ ಫೈನಲ್‍ನ ಸೋಲಿನ ನಂತರ ಅದನ್ನು ಮರೆತು ಅವರ ವಿರುದ್ಧ ಉತ್ತಮ ಕ್ರಿಕೆಟ್ ಆಡಿದ್ದೇವೆ. ನಾವು ಈ ಪಂದ್ಯವನ್ನು ಹೆಚ್ಚು ಭಾವನಾತ್ಮಕವಾಗಿ ತೆಗೆದುಕೊಂಡಿದ್ದರೆ ಆಟವಾಡಲು ಕಷ್ಟವಾಗುತ್ತಿತು ಎಂದು ಹೇಳಿದ್ದಾರೆ.
Advertisement
ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಅಭಿಮಾನಿಗಳು ತೆಗೆದುಕೊಳ್ಳುವ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಕ್ರಿಕೆಟಿಗರಾದ ನಾವು ಆಟವಾನ್ನು ವೃತ್ತಿಪರವಾಗಿ ಆಡಬೇಕು ಮತ್ತು ಪಂದ್ಯಕ್ಕಾಗಿ ಮೈದಾನದಲ್ಲಿ ಏನೂ ಮಾಡಬೇಕು ಎಂಬುವುದನ್ನು ಅರ್ಥಮಾಡಿಕೊಂಡಿರಬೇಕು ಎಂದು ಹೇಳಿದರು.
Advertisement
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು. ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.