ಬೆಂಗಳೂರು: ಇಂಡಿಯಾ (INDIA) ಹೆಸರು ಭಾರತ್ (Bharat) ಎಂದು ಬದಲಾವಣೆ ಮಾಡುತ್ತಿರುವುದು ಕೇವಲ ರಾಜಕಾರಣಕ್ಕೆ (Politics) ಮಾತ್ರ ಎಂದು ಕೇಂದ್ರದ ನಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Prameshwar) ವಿರೋಧಿಸಿದ್ದಾರೆ.
ಇಂಡಿಯಾ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯುನೈಟೆಡ್ ನೇಷನ್ಸ್ ಹೋಗಿ ಇವರೆಲ್ಲ ನೋಡಲಿ. ಪ್ರಧಾನಿಗಳು, ವಿದೇಶಾಂಗ ಮಂತ್ರಿಗಳು ಹೋಗುತ್ತಾರೆ ಅಲ್ಲವಾ, ಅಲ್ಲಿ ಮೊದಲು ನೋಡಲಿ. ಅಲ್ಲಿ ಬೋರ್ಡ್ ಇಟ್ಟಿದ್ದಾರೆ. ಅಲ್ಲಿ ಇಂಡಿಯಾ ಅಂತ ಹೆಸರು ಇಟ್ಟಿದ್ದಾರೆ. ಕಾನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಂತ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್ ಭಾಗವತ್
ಇವರು ಮೇಕ್ ಇನ್ ಇಂಡಿಯಾ ಅಂತ ಮಾಡಿರಲಿಲ್ಲವಾ? ಯಾಕೆ ಅವರು ಆಗಲೇ ಮೇಕ್ ಇನ್ ಭಾರತ ಅಂತ ಹೇಳಬಹುದಿತ್ತು ಅಲ್ಲವಾ? ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು. ಇಂಡಿಯಾ ಹೆಸರಿನಲ್ಲಿ ಏನಾದರೂ ತಪ್ಪು ಇದ್ದರೆ, ಬಹಳ ಕೆಟ್ಟದಾಗಿ ಇದೆ ಅಂತಿದ್ದರೆ, ದೇಶಕ್ಕೆ ಕೆಟ್ಟದಾಗುತ್ತಿದೆ ಅಂತ ಇದ್ದರೆ ನಾವು ಅರ್ಥ ಮಾಡಿಕೊಳ್ಳೋಣ. ಈ ವಿಷಯ ಚರ್ಚೆ ಬೇಕಾಗಿದೆಯಾ? ಇಂಡಿಯಾ ಅಂತ ಒಕ್ಕೂಟ ರಚನೆ ಮಾಡಿದ್ದಕ್ಕೆ ಭಾರತ್ ಮಾಡಲು ಹೊರಟಿದ್ದಾರೆ ಅಂತ ನಾವು ಅರ್ಥೈಸಬೇಕಾಗುತ್ತದೆ. ಇದರಲ್ಲಿ ರಾಜಕಾರಣ ಅಷ್ಟೆ. ಬೇರೆ ಏನು ಇಲ್ಲ ಎಂದರು. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]