ನವದೆಹಲಿ: ಸಂಸತ್‌ನಲ್ಲಿಂದು ಮಹತ್ವದ ಬೆಳವಣಿಗೆ ನಡೆಯಿತು. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಅವರ ಪದಚ್ಯುತಿಗೆ ಒತ್ತಾಯಿಸಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದವು.
ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಎಂ, ಎಎಪಿ, ಸಮಾಜವಾಧಿ ಪಕ್ಷಗಳ ಸುಮಾರು 60 ಸದಸ್ಯರು ಸಹಿ ಹಾಕಿದ್ದ ನೋಟಿಸ್ ಅನ್ನು ವಿಪಕ್ಷಗಳ ಪರವಾಗಿ ಕಾಂಗ್ರೆಸ್ ಸದಸ್ಯರಾದ ಜೈರಾಮ್ ರಮೇಶ್ (Jairam Ramesh), ನಾಸಿರ್ ಹುಸೇನ್ ಅವರು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ
Advertisement
Advertisement
ಜಗದೀಪ್ ಧನಕರ್ ಅವರು ಪಕ್ಷಪಾತಿಯಾಗಿ ವ್ಯವಹರಿಸ್ತಿದ್ದಾರೆ, ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದೆ. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದವು. ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಪದಚ್ಯುತಿಗೆ ಪ್ರಸ್ತಾವನೆ ತರಲು ನೋಟಿಸ್ ಮಂಡನೆಯಾಗುತ್ತಿರುವುದು ಇದೇ ಮೊದಲು. ಇದನ್ನೂ ಓದಿ: ‘ಪುಷ್ಪ 2’ ಭರ್ಜರಿ ಕಲೆಕ್ಷನ್- 922 ಕೋಟಿ ಗಳಿಕೆ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ
Advertisement
ಕಳೆದ ಆಗಸ್ಟ್‌ನಲ್ಲೇ ಇಂಡಿಯಾ ಒಕ್ಕೂಟ ಎಲ್ಲ ಸದಸ್ಯರಿಗೆ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ಸಹಿ ಸಂಗ್ರಹಿಸಲು ಕರೆ ನೀಡಲಾಗಿತ್ತು. ನಂತರ ಧನಕರ್ ಅವರ ಮುಂದಿನ ನಡೆಯನ್ನು ಕಾದುನೋಡೋಣವೆಂದು ನಿರ್ಧಾರ ಕೈಬಿಟ್ಟಿದ್ದರು. ಇದೀಗ ಮತ್ತೆ ಉಪರಾಷ್ಟ್ರಪತಿಗಳು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ. ಸಂಸದೀಯ ಪ್ರಜಾಪ್ರಭುತ್ವದ ಹಿತಾಸಕ್ತಿಯಿಂದ ಈ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
Advertisement
ಹಿಂದಿನ ಘಟನೆಗಳು ನೆನಪಿದೆಯೇ?
ಈ ಹಿಂದೆ ಲೋಕಸಭೆಯ ಸ್ಪೀಕರ್ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ಮಂಡನೆ ಆಗಿತ್ತು. ಆದ್ರೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿಗಳ ವಿರುದ್ಧ ಆಗಿರಲಿಲ್ಲ. ಲೋಕಸಭೆ ಸ್ಪೀಕರ್‌ಗಳ ವಿರುದ್ಧ ಈ ಹಿಂದೆ ಮೂರು ನಿರ್ಣಯಗಳು ಮಂಡನೆಯಾಗಿತ್ತು. 1954ರ ಡಿ.18ರಂದು ಜಿ.ವಿ ಮಾವಲಂಕರ್ ವಿರುದ್ಧ, 1966ರ ನ.24ರಂದು ಹುಕಮ್ ಸಿಂಗ್ ವಿರುದ್ಧ ಹಾಗೂ 1987ರ ಏಪ್ರಿಲ್ 15 ರಂದು ಬಲರಾಮ್ ಜಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆದ್ರೆ ರಾಜ್ಯಸಭೆ ಸಭಾಪತಿ ವಿರುದ್ಧ ಇದೇ ಮೊದಲ ಬಾರಿಗೆ ನಿರ್ಣಯ ಮಂಡನೆಯಾಗಿದೆ. ಇದನ್ನೂ ಓದಿ: ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ