ಲಕ್ನೋ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯೂ ಜೂನ್ 22ರ ಸುಮಾರಿಗೆ ಪ್ರಾರಂಭವಾಗಬಹುದು ಮತ್ತು ಆಗಸ್ಟ್ ಮಧ್ಯದ ವೇಳೆ ಅಂತ್ಯವಾಗಬಹುದು ಎಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರದ ಸಂಶೋಧಕರು ನಡೆಸಿದ ಅಧ್ಯಯನ ಮಾದರಿಯಲ್ಲಿ ಸೂಚಿಸಲಾಗಿದೆ.
ಕೊರೊನಾ ನಾಲ್ಕನೇ ಅಲೆಯೂ ಸರಿಸುಮಾರು ನಾಲ್ಕು ತಿಂಗಳುಗಳವರೆಗೆ ಇರುತ್ತದೆ ಮತ್ತು ಮೊದಲ ಮತ್ತು ಎರಡನೇ ವ್ಯಾಕ್ಸಿನ್ ಡೋಸ್‍ಗಳನ್ನು ಸ್ವೀಕರಿಸಿದ್ದರು ಸಹ ಕೊರೊನಾ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಐಐಟಿ ಕಾನ್ಪುರದ ಹಿರಿಯ ಸಂಶೋಧಕರು ಹೇಳಿದ್ದಾರೆ. ಐಐಟಿ ಕಾನ್ಪುರದ ಗಣಿತ ವಿಭಾಗದ ಸಬರ ಪರ್ಷದ್ ರಾಜೇಶ್‍ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಇದನ್ನೂ ಓದಿ: ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ
ಇತ್ತೀಚೆಗಷ್ಟೇ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಲಾದ ಮತ್ತೊಂದು ಅಧ್ಯಯನದಲ್ಲಿ ಮುಂದೆ ಕೋವಿಡ್ ರೂಪಾಂತರಿ ವೈರಸ್ ಎರಡು ವಿಭಿನ್ನ ರೀತಿಯಲ್ಲಿ ಹೊರಹೊಮ್ಮಬಹುದು ಎಂದು ತಿಳಿಸಿದೆ ಮತ್ತು ಹೊಸ ರೂಪಾಂತರವು ಹಿಂದೆ ಇದ್ದ ವೈರಸ್‍ಗಳಿಗಿಂತ ಕಡಿಮೆ ತೀವ್ರತೆಯದಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ