ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಸಾಧನೆ ಮಾಡಿದ್ದು ದೇಶದ ಮೊದಲ ಖಾಸಗಿ ರಾಕೆಟ್ (Rocket) ಅನ್ನು ಇಸ್ರೋ (ISRO) ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್-ಎಸ್ (Vikram-S) ಹೆಸರಿನ ಖಾಸಗಿ ರಾಕೆಟ್ ಉಡಾವಣೆ ಮಾಡಲಾಗಿದೆ.
ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್‌ನ ನಿರ್ಮಿಸಿದ್ದ ರಾಕೆಟ್ ಅನ್ನು ಇಸ್ರೋ ಉಡಾಯಿಸಿದೆ. ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯುತ್ತಿದ್ದು ಭೂಮಿಯ ಕಕ್ಷೆಗೆ ಸೇರಿಸಲಿದೆ.
Advertisement
Advertisement
ವಿಕ್ರಮ್-ಎಸ್ ರಾಕೆಟ್ ಏಕ-ಹಂತದ ಉಪ-ಕಕ್ಷೆಯ ಉಡಾವಣಾ ವಾಹನವಾಗಿದ್ದು ಅದು 3 ಗ್ರಾಹಕ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ ಮತ್ತು ವಿಕ್ರಮ್ ಸರಣಿಯ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿನ ಹೆಚ್ಚಿನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ. ವಿಕ್ರಮ್-ಎಸ್ ಉಡಾವಣಾ ವಾಹನದಲ್ಲಿ ಬಳಸಲಾದ ಎಂಜಿನ್‌ಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವವರೆಗೂ ಭಾರತ ವಿಶ್ರಮಿಸಲ್ಲ – ಮೋದಿ
Advertisement
2018 ರಲ್ಲಿ ಸ್ಥಾಪನೆಯಾದ ಸ್ಕೈರೂಟ್, ಸುಧಾರಿತ ಸಂಯೋಜಿತ ಮತ್ತು 3ಡಿ-ಮುದ್ರಣ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್, ಹೈಪರ್ಗೋಲಿಕ್-ಲಿಕ್ವಿಡ್ ಮತ್ತು ಘನ ಇಂಧನ ಆಧಾರಿತ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ತಯಾರಿಸಿ ಪರೀಕ್ಷಿಸಲಾಗಿತ್ತು.
Advertisement
????????India’s 1st-ever private launch of Vikram Suborbital rocket takes place at Satish Dhawan Space Centre, Sriharikota.
▪️ This mission is milestone in history of ISRO. A non govet entity, Start up Skyroot Aerospace Pvt Ltd had developed the single stage Vikram Suborbital rocket. pic.twitter.com/2F6IkUfGHM
— All India Radio News (@airnewsalerts) November 18, 2022
ಸ್ಪೇಸ್‌ಕಿಡ್ಜ್ ಇಂಡಿಯಾ, ಬಜೂಮ್ಕ್ ಅರ್ಮೇನಿಯಾ ಹಾಗೂ ಎನ್-ಸ್ಪೇಸ್ ಟೆಕ್ ಇಂಡಿಯಾ ಅಭಿವೃದ್ಧಿಪಡಿಸಿದ 3 ಪೇಲೋಡ್‌ಗಳನ್ನು ವಿಕ್ರಮ್-ಎಸ್ ಹೊತ್ತೊಯ್ದಿದೆ. ಈ ರಾಕೆಟ್ ಅನ್ನು 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಾಕೆಟ್ 6 ಮೀ. ಉದ್ದ, 0.375 ಮೀ. ವ್ಯಾಸ ಹಾಗೂ 545 ಕೆಜಿ ತೂಕವನ್ನು ಹೊಂದಿದೆ.
ಸದ್ಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿರುವ ವಿಕ್ರಮ್-ಎಸ್ ರಾಕೆಟ್ 81 ಕಿಮೀ ಎತ್ತರಕ್ಕೆ ಹಾರಲಿದ್ದು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್ ಎಂದು ಹೆಸರಿಡಲಾಗಿದೆ. ಈ ಮಿಶನ್‌ಗೆ ‘ಪ್ರಾರಂಭ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಮಸ್ಕ್ ಗಡುವಿಗೂ ಮೊದಲೇ ನೂರಾರು ಟ್ವಿಟ್ಟರ್ ಉದ್ಯೋಗಿಗಳು ರಾಜೀನಾಮೆ