ಓಲ್ಡ್ ಟ್ರಾರ್ಫಡ್: ವಿಶ್ವಕಪ್ ಟೂರ್ನಿಯ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಯಶಸ್ಸನ್ನು ಸಾಧಿಸಿದೆ. ಆದರೆ ಇನ್ನಿಂಗ್ಸ್ ಮೊದಲ ಎಸೆತದಲ್ಲೇ ಟೀಂ ಇಂಡಿಯಾ ರಿವ್ಯೂ ಅವಕಾಶವನ್ನು ಕಳೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ಪರ ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲಾಸ್ ಇನ್ನಿಂಗ್ಸ್ ಆರಂಭಿಸಿದ್ದರು. ಇತ್ತ ಮೊದಲ ಓವರ್ ಬೌಲ್ ಮಾಡಿದ ಭುವನೇಶ್ವರ್ ಮೊದಲ ಎಸೆತದಲ್ಲೇ ಭಾರತ ಎಲ್‍ಬಿ ಡಬ್ಲೂ ಬಲೆಗೆ ಕೆಡವಲು ಯತ್ನಿಸಿದ್ದರು. ಭುವಿ ಎಸೆದ ಚೆಂಡು ಗುಪ್ಟಿಲ್ ಪ್ಯಾಡ್‍ಗೆ ಬಡಿದಿತ್ತು. ಕೂಡಲೇ ಭುವಿ ಎಲ್‍ಬಿಡಬ್ಲೂ ಮನವಿ ಮಾಡಿದರು. ಆದರೆ ಆಂಪೈರ್ ನಿರಾಕರಿಸಿದ ಪರಿಣಾಮ ಕೊಹ್ಲಿ ಮೊದಲ ಎಸೆತದಲ್ಲೇ ರಿವ್ಯೂ ಅವಕಾಶವನ್ನು ಬಳಿಸಿಕೊಂಡಿದ್ದರು.
Advertisement
Bhuvneshwar Kumar has the new ball in his hand. Martin Guptill and Henry Nicholls are out to open the batting.
Let’s play!
Follow #INDvNZ live on the official #CWC19 app ⬇️
APPLE ???? https://t.co/whJQyCahHr
ANDROID ???? https://t.co/Lsp1fBwBKR pic.twitter.com/DeEYAzcG6T
— Cricket World Cup (@cricketworldcup) July 9, 2019
Advertisement
ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಲೆಗ್ ಸ್ಟಂಪ್‍ಗೆ ಹತ್ತಿರದಲ್ಲಿ ಸಾಗಿದ್ದ ಪರಿಣಾಮ ನಾಟೌಟ್ ತೀರ್ಪು ಲಭಿಸಿತ್ತು. ಪರಿಣಾಮ ಭಾರತ ತನ್ನ ಏಕೈಕ ರಿವ್ಯೂ ಅವಕಾಶವನ್ನು ಕಳೆದುಕೊಂಡು ಅಘಾತ ಎದುರಿಸಿತು. ಉಳಿದಂತೆ ಇನ್ನಿಂಗ್ಸ್ ನ 4ನೇ ಓವರಿನಲ್ಲಿ ಬುಮ್ರಾ ಬೌಲಿಂಗ್ ನಲ್ಲಿ 1 ರನ್ ಗಳಿಸಿದ್ದ ಗುಪ್ಟಿಲ್ ವಿಕೆಟ್ ಒಪ್ಪಿಸಿದರು.
Advertisement
ಮೇಡನ್ ಓವರ್: ಪಂದ್ಯದಲ್ಲಿ ಬಿಗಿ ಬೌಲಿಂಗ್ ನಡೆಸುತ್ತಿರುವ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ಮೇಡನ್ ಸಾಧನೆ ಮಾಡಿದ್ದಾರೆ. ಇನ್ನಿಂಗ್ ಮೊದಲ 2 ಓವರ್ ಗಳು ಮೇಡನ್ ಆಗಿದ್ದು ವಿಶೇಷವಾಗಿತ್ತು. ಇನ್ನು 2019ರ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಇದುವರೆಗೂ 9 ಮೇಡನ್ ಓವರ್ ಬೌಲ್ ಮಾಡಿದ್ದಾರೆ. ಉಳಿದಂತೆ 8 ಓವರ್ ಮೆಡಿನ್ ಮಾಡಿರುವ ಇಂಗ್ಲೆಂಡ್ ತಂಡದ ಜೊಫ್ರೆ ಆರ್ಚರ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ್ದಾರೆ.
Advertisement
Tough India lost their only DRS off the very first ball of the match, but the appeal has rattled the Kiwis.#CWC19 #CWC2019 #INDvNZ #NZvIND #SemiFinal1
— Mohandas Menon (@mohanstatsman) July 9, 2019
Review lost ????.
Bumrah: #INDvNZ #NZvIND pic.twitter.com/OANDChQ1aL
— Gabbar (@RoflMojito) July 9, 2019