Connect with us

Cricket

ಟೀಂ ಇಂಡಿಯಾಗೆ 40 ರನ್ ಸೋಲು – ನ.7ಕ್ಕೆ ನಿರ್ಣಾಯಕ ಪಂದ್ಯ

Published

on

ರಾಜ್ ಕೋಟ್: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 40 ರನ್ ಗಳಿಂದ ಸೋತಿದೆ. ಈ ಮೂಲಕ 3 ಪಂದ್ಯಗಳ ಸರಣಿ 1-1ರ ಸಮಬಲ ಸಾಧಿಸಿದೆ. ಮಂಗಳವಾರ ತಿರುವನಂತಪುರಂನಲ್ಲಿ ನಡೆಯಲಿರುವ ಪಂದ್ಯ ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 156 ರನ್ ಮಾತ್ರ ಗಳಿಸುವುದು ಸಾಧ್ಯವಾಯಿತು.

ನ್ಯೂಜಿಲೆಂಡ್ ಪರವಾಗಿ ಕಾಲಿನ್ ಮನ್ರೋ 28 ಎಸೆತಗಳಲ್ಲಿ 109 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್ ನಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಗಳಿದ್ದವು. ಮನ್ರೋ ಗೆ ಮಾರ್ಟಿನ ಗಪ್ಟಿಲ್ ಉತ್ತಮ ಜೊತೆಯಾಟ ನೀಡಿದರು. 41 ಎಸೆತಗಳಲ್ಲಿ 3 ಬೌಂಡರಿ ಹಾಗೂ3 ಸಿಕ್ಸರ್ ಗಳನ್ನೊಳಗೊಂಡ 45 ರನ್ ಗಳಿಸಿದರು. ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಸಿರಾಜ್ ಹಾಗೂ ಚಾಹಲ್ ತಲಾ 1 ವಿಕೆಟ್ ಗಳಿಸಿದರು. ಮೊಹಮ್ಮದ್ ಸಿರಾಜ್ 4 ಓವರ್ ನಲ್ಲಿ 53 ರನ್ ಹಾಗೂ ಚಾಹಲ್ 4 ಓವರ್ ನಲ್ಲಿ 39 ರನ್ ಬಿಟ್ಟು ಕೊಟ್ಟರು. ಅಕ್ಷರ್ ಪಟೇಲ್ 3 ಓವರ್ ನಲ್ಲಿ 39 ರನ್ ಹಾಗೂ ಹಾರ್ದಿಕ್ ಪಾಂಡ್ಯ 1 ಓವರ್ ನಲ್ಲಿ 14 ರನ್ ನೀಡಿದರು.

197 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ 2 ಓವರ್ ಗಳಲ್ಲೇ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ಶಿಖರ್ ಧವನ್ 1 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 5 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 21 ಎಸೆತದಲ್ಲಿ 23 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 1 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 65 ಹಾಗೂ ಮಹೇಂದ್ರ ಸಿಂಗ್ ಧೋನಿ 49 ರನ್ ಗಳಿಸಿ ಟೀಂ ಇಂಡಿಯಾದ ಮಾನ ಉಳಿಸಿದರು. ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೋಲ್ಟ್ 4 ವಿಕೆಟ್ ಗಳಿಸಿದರೆ ಸಾಂಟ್ನರ್, ಸೋಧಿ ಹಾಗೂ ಮುನ್ರೋ ತಲಾ 1 ವಿಕೆಟ್ ಗಳಿಸಿದರು.

Click to comment

Leave a Reply

Your email address will not be published. Required fields are marked *