ನವದೆಹಲಿ: ಕೊರೊನಾ ವಿರುದ್ಧದ ಯುದ್ಧಕ್ಕೆ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಿದ್ದು, ಮುಂದಿನ ಮೂರು ವಾರ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಏಪ್ರಿಲ್ 14ರವರೆಗೆ ನಿಮಗೆ ನೀವು ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ಲಾಕ್‍ಡೌನ್ ಆದ್ರೂ ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.
ಮುಂದಿನ 21 ದಿನ ದೇಶದಲ್ಲಿ ಏನಿರುತ್ತೆ? ಏನಿರಲ್ಲ? ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸದಿದ್ರೆ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ.
Advertisement
Advertisement
ಏನಿರುತ್ತೆ:
1. ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಡಿಫೆನ್ಸ್, ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸ್, ಅಗತ್ಯ ಸೇವೆಗಳು (ಪೆಟ್ರೋಲಿಯಂ, ಸಿಎನ್‍ಜಿ, ಎಲ್‍ಪಿಜಿ ಮತ್ತು ಪಿಎನ್‍ಜಿ), ವಿಪತ್ತು ನಿರ್ವಹಣೆ, ವಿದ್ಯುತ್ ಪ್ರಸರಣ ಕೇಂದ್ರಗಳು, ಅಂಚೆ ಕಚೇರಿಗಳು ತೆರೆದಿರುತ್ತವೆ.
2. ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವ ಕಚೇರಿಗಳು. ಪೊಲೀಸ್, ಹೋಮ್ ಗಾರ್ಡ್ಸ್ , ವಿದ್ಯುತ್ ಪ್ರಸರಣ, ಜಲ ಮಂಡಳಿ ಸೇರಿದಂತೆ ಅಗತ್ಯ ಸೇವೆಗಳು ಲಭ್ಯ .
Advertisement
3. ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ (ಖಾಸಗಿ ಮತ್ತು ಸರ್ಕಾರಿ), ಅಂಬುಲೆನ್ಸ್, ಮೆಡಿಕಲ್, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್
4. ಪ್ರಾವಿಸನ್ ಸ್ಟೋರ್, ಹಾಲು, ಹಣ್ಣು, ತರಕಾರಿ, ಮಾಂಸ, ಮೀನು, ಪ್ರಾಣಿಗಳ ಆಹಾರ
5. ಬ್ಯಾಂಕ್, ವಿಮೆ ಕಚೇರಿಗಳು ಮತ್ತು ಎಟಿಎಂ
6. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ
7. ಇ-ಕಾಮರ್ಸ್ ನಲ್ಲಿ ಆಹಾರ, ಮೆಡಿಸಿನ್ ಮತ್ತು ಔಷಧ ಉತ್ಪನ್ನಗಳು
8. ಪೆಟ್ರೋಲ್ ಪಂಪ್, ಎಲ್‍ಪಿಜಿ ಸೇರಿದಂತೆ ಇಂಧನ ಲಭ್ಯ
9. ಶೀತಘಟಕ (ಕೋಲ್ಡ್ ಸ್ಟೋರೇಜ್)
10. ಖಾಸಗಿ ಭದ್ರತೆ ಸೇವೆ
11. ಅಗತ್ಯ ವಸ್ತುಗಳ ಉತ್ಪಾದನ ಘಟಕಗಳು
12. ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ಸಂಸ್ಥೆಗಳು
13. ಅಗತ್ಯ ವಸ್ತು ಮತ್ತು ತುರ್ತು ಸೇವೆಗಳಿಗೆ ಮಾತ್ರ ವಾಹನ ಸೌಲಭ್ಯ
14. ಪ್ರವಾಸಿ ಸ್ಥಳದಲ್ಲಿರುವ ಹೋಟೆಲ್, ಮಾರ್ಗ ಮಧ್ಯೆ ಸಿಲುಕಿದ ಪ್ರವಾಸಿಗರಿಗಾಗಿ ಲಾಡ್ಜ್, ಹೋಂ ಸ್ಟೇ ಸೌಲಭ್ಯ
15. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಜನರು ಸೇರುವಂತಿಲ್ಲ.
Advertisement
ಏನೇನು ಬಂದ್ ಆಗಲಿವೆ?
1. ಎಲ್ಲ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು
2. ವಿನಾಯಿತಿ ಪಡೆದ ಹಾಗೂ ವರ್ಕ್ ಫ್ರಮ್ ಹೋಮ್ ಬಿಟ್ಟು ಎಲ್ಲ ಸಂಸ್ಥೆಗಳು
3. ಕೈಗಾರಿಕಾ ಸಂಸ್ಥೆಗಳು
4. ವಿಮಾನ, ರೈಲು, ರಸ್ತೆ ಸಾರಿಗೆ ಸೇರಿ ಎಲ್ಲ ಸಾರಿಗೆ ಸೌಲಭ್ಯ
5. ಶಿಕ್ಷಣ ಸಂಸ್ಥೆಗಳು
6. ಸಾಮೂಹಿಕ ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮ, ಸಭೆಗಳಿಗೆ ನಿರ್ಬಂಧ
7. ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ಏನಾಗುತ್ತೆ?
* ಅಧಿಕೃತ ವ್ಯಕ್ತಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಒಂದು ವರ್ಷ ಜೈಲು ಅಥವಾ ದಂಡ ಇಲ್ಲವೇ ಎರಡೂ ಶಿಕ್ಷೆ ವಿಧಿಸಲಾಗುವುದು.
* ಲಾಕ್‍ಡೌನ್ ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿದರೆ 2 ವರ್ಷಳವರೆಗೆ ಜೈಲು ಮತ್ತು ದಂಡ ವಿಧಿಸಬಹುದು.
* ಕೃತಕ ಬೆಲೆ ಏರಿಕೆಯಲ್ಲಿ ಭಾಗಿಯಾದರೆ, ಪರಿಹಾರ ಸಾಮಗ್ರಿಗಳ ಬೆಲೆ ಹೆಚ್ಚಿಸಿದರೆ 2 ವರ್ಷ ಜೈಲು ಹಾಗೂ ದಂಡ
* ಸುಳ್ಳು ಸುದ್ದಿ ಹಬ್ಬಿಸಿ ಭಯ ಹುಟ್ಟಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು.