ನವದೆಹಲಿ: ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡ ಪತಿ ಬರೋಬ್ಬರಿ 257 ಕಿ.ಮೀ. ನಡೆದುಕೊಂಡು ಬಂದಿದ್ದಾರೆ.
ಅಹಮದಾಬಾದ್ ನಿಂದ ಬಾಂಸವಾಡಕ್ಕೆ ದಂಪತಿ ಪ್ರಯಾಣ ಬೆಳೆಸಿದ್ದರು. ಆದ್ರೆ ಪತ್ನಿಯ ಕಾಲು ಫ್ರ್ಯಾಕ್ಚರ್ ಆಗಿದ್ದರಿಂದ ಪತಿ ಹೆಗಲ ಮೇಲೆ ಹೊತ್ತುಕೊಂಡು ಊರು ತಲುಪಿದ್ದಾನೆ. ದಂಪತಿ ಬಳಿ ಯಾವುದೇ ವಾಹನಗಳಿಲ್ಲದ ಹಿನ್ನೆಲೆಯಲ್ಲಿ ಹೊತ್ತುಕೊಂಡು ಸಾಗಿದ್ದಾರೆ.
Advertisement
Advertisement
ಭಾರತ ಲಾಕ್‍ಡೌನ್ ಆಗಿದ್ದರಿಂದ ಎಲ್ಲ ಕೆಲಸಗಳು ನಿಂತಿವೆ. ದಿನನಿತ್ಯ ಕೂಲಿ, ಕಟ್ಟಡಗಳಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ವರ್ಗ ಊರುಗಳತ್ತ ಮುಖ ಮಾಡಿದ್ದಾರೆ. ಕೆಲವರು ವಾಹನಗಳು ಸಿಗದಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಯತ್ತ ಜನ ನಡೆದುಕೊಂಡು ಹೋಗುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.
Advertisement
Advertisement
ಕೆಲವು ದಿನಗಳ ಹಿಂದೆ ಬಾಲಕನೋರ್ವ ತಾನು ಬಿಹಾರಕ್ಕೆ ಹೋಗಬೇಕೆಂದು ಕಣ್ಣೀರು ಹಾಕಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೆಹಲಿಯಲ್ಲಿ ಕೆಲಸ ನಿಂತಿದೆ, ಊರಿಗೆ ತೆರಳಲು ಯಾವುದೇ ಬಸ್, ರೈಲು ಇಲ್ಲ. ಇಲ್ಲಿ ಉಳಿದುಕೊಳ್ಳಲು ಸ್ಥಳವೂ ಇಲ್ಲ ಎಂದು ಕಣ್ಣೀರು ಹಾಕಿದ್ದನು.