ನ್ಯೂಯಾರ್ಕ್: ಮುಂದಿನ ವರ್ಷದಲ್ಲಿ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ. 2022ರ ನವೆಂಬರ್ ವೇಳೆಗೆ ವಿಶ್ವದ ಜನಸಂಖ್ಯೆ 8 ಶತಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆ ಸೋಮವಾರ ವರದಿಯಲ್ಲಿ ತಿಳಿಸಿದೆ.
ಜಾಗತಿಕ ಜನಸಂಖ್ಯೆ 1950 ರಿಂದ ನಿಧಾನಗತಿಯಲ್ಲಿ ಬೆಳೆಯುತ್ತಿದೆ. 2030ರಲ್ಲಿ ವಿಶ್ವದ ಜನಸಂಖ್ಯೆ 8.5 ಶತಕೋಟಿ ಹಾಗೂ 2050ರ ವೇಳೆಗೆ 9.7 ಶತಕೋಟಿಗೆ ಏರಿಕೆಯಾಗಬಹುದು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ – ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳಗಡೆ
Advertisement
Advertisement
2080ರ ವೇಳೆಗೆ ಜನಸಂಖ್ಯೆ 10.4 ಶತಕೋಟಿಗೆ ಏರಿಕೆಯಾಗಿ, 2100ರ ವರೆಗೆ ಈ ಸಂಖ್ಯೆ ಉಳಿದುಕೊಳ್ಳಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸಚಿವರಾಗಿರುವ ಪುಣ್ಯಾತ್ಮರು ಸರಿಯಾಗಿ ಕೆಲಸ ಮಾಡಲಿ: ಯತ್ನಾಳ್ ಟಾಂಗ್
Advertisement
2023ರಲ್ಲಿ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ. ಸದ್ಯದ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳೆಂದರೆ ಚೀನಾ ಹಾಗೂ ಭಾರತ. ಚೀನಾ ಸದ್ಯ 2.3 ಶತಕೋಟಿ ಜನಸಂಖ್ಯೆ ಹೊಂದಿದ್ದು, ಜಾಗತಿಕ ಜನಸಂಖ್ಯೆಯ ಶೇ.29 ರಷ್ಟು ಪಾಲನ್ನು ಹೊಂದಿದೆ. ಭಾರತ 2.3 ಶತಕೋಟಿ ಜನಸಂಖ್ಯೆ ಹೊಂದಿದ್ದು, ವಿಶ್ವದ ಒಟ್ಟು ಜನಸಂಖ್ಯೆಯ ಶೇ.26 ರಷ್ಟು ಪಾಲನ್ನು ಹೊಂದಿದೆ ಎಂದು ಹೇಳಿದೆ.