ನವದೆಹಲಿ: ವಿಶ್ವದಲ್ಲೇ ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿ ಸದ್ಯ ಚೀನಾ ಇದೆ. ಆದರೆ ಸದ್ಯದಲ್ಲೆ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಯುನ್ ವರದಿ ನೀಡಿದೆ.
ಹೌದು. 2027ರ ಹೊತ್ತಿಗೆ ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಸದ್ಯ ನಂಬರ್ 1 ಸ್ಥಾನದಲ್ಲಿರುವ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ 2060ರ ಸಮಯಕ್ಕೆ ಚೀನಾದ ಜನಸಂಖ್ಯೆ ಗರಿಷ್ಟ ಮಟ್ಟವನ್ನು ತಲುಪಲಿದ್ದು, 2100ರ ವೇಳೆಗೆ ಚೀನಾದಲ್ಲಿ 375 ದಶಲಕ್ಷ ಜನಸಂಖ್ಯೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಜನಸಂಖ್ಯಾ ಅಂಕಿಅಂಶಗಳ ಪ್ರಕಾರ, ವಿಶ್ವದ ಜನಸಂಖ್ಯೆಯು 2050ರ ವೇಳೆಗೆ 9.7 ಶತಕೋಟಿ ತಲುಪುವ ನಿರೀಕ್ಷೆಯಿದ್ದು, 2100 ವೇಳೆಗೆ 11 ಶತಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಯುರೋಪ್ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, 2100 ಹೊತ್ತಿಗೆ 120 ದಶಲಕ್ಷದಷ್ಟು ಜನಸಂಖ್ಯೆ ಕಡಿಮೆಯಾಗಲಿದೆ ಎಂದಿದೆ. ಸುಮಾರು 750 ದಶಲಕ್ಷದಿಂದ 630 ದಶಲಕ್ಷಕ್ಕೆ ಇಲ್ಲಿ ಜನಸಂಖ್ಯೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.
Advertisement
ಹಾಗೆಯೇ ಇಟಲಿಯಲ್ಲಿ ಸುಮಾರು 20 ದಶಲಕ್ಷ ಜನಸಂಖ್ಯೆ ಕಡಿಮೆಯಾಗಲಿದೆ, ಜರ್ಮನಿಯಲ್ಲಿ 9 ದಶಲಕ್ಷ ಮತ್ತು ಅಲ್ಬೆನೀಯಾ, ಮಲ್ಡೋವಾ ಹಾಗೂ ಸೆರ್ಬಿಯದ ಜನಸಂಖ್ಯೆ ಅರ್ಧದಷ್ಟು ಕಡಿಮೆಯಾಗುವ ಲಕ್ಷಣಗಳಿವೆ ಎಂದು ಯುನ್ ವರದಿ ಮಾಡಿದೆ.
Advertisement
ಆದರೆ ಇಂಗ್ಲೆಂಡ್ ನಲ್ಲಿ 2100 ಹೊತ್ತಿಗೆ ಸುಮಾರು 10 ದಶಲಕ್ಷದಷ್ಟು ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿಂದೆ ಎನ್ನಲಾಗಿದೆ. ಹಾಗೆಯೇ ನಾರ್ವೆ, ಸ್ವೀಡನ್, ಐರ್ಲೆಂಡ್ ಮತ್ತು ಸ್ವಿಡ್ಜರ್ಲೆಂಡ್‍ಗಳಲ್ಲಿ ಕೂಡ ಜನಸಂಖ್ಯೆ ಹೆಚ್ಚುತ್ತದೆ. 20 ವರ್ಷಗಳ ಅವಧಿಯಲ್ಲಿ ಅಧಿಕ ಆದಾಯ ಹೊಂದಿರುವ ದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಕೆಲವು ಪ್ರಮುಖ ಆರ್ಥಿಕತೆಯ ಕಾರಣದಿಂದ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಜನಸಂಖ್ಯೆಯಲ್ಲಿ ಇಳಿಕೆ ಆಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
10 ಅತಿದೊಡ್ಡ ರಾಷ್ಟ್ರಗಳ ಜನಸಂಖ್ಯಾ ಪಟ್ಟಿಯಲ್ಲಿ ಬ್ರೆಜಿಲ್, ಬಾಂಗ್ಲಾದೇಶ, ರಷ್ಯಾ ಮತ್ತು ಮೆಕ್ಸಿಕೋ ಸ್ಥಾನಗಳನ್ನು ಇಥಿಯೋಪಿಯಾ, ಈಜಿಪ್ಟ್, ಡಿಆರ್ ಕಾಂಗೋ, ಟಾಂಜಾನಿಯಾ ದೇಶಗಳು ಪಡೆಲಿದೆ. ಅಲ್ಲದೆ ನೈಜೀರಿಯಾ ಮೂರನೇ ಸ್ಥಾನ ಹಾಗೂ ಯುಎಸ್ ನಾಲ್ಕನೇ ಸ್ಥಾನಕ್ಕೆ ಇಳಿಯಲಿದೆ.
ಅಷ್ಟೇ ಅಲ್ಲದೆ ಬಡ ರಾಷ್ಟ್ರಗಳಲ್ಲಿಯೇ ಜನಸಂಖ್ಯೆಯೂ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಶ್ರೀಲಂಕಾದ ಆರ್ಥಿಕಾ ಮತ್ತು ವ್ಯವಹಾರಗಳ ಕಾರ್ಯದರ್ಶಿ ಲಿಯೂ ಹೇಳಿದ್ದಾರೆ.