ನವದೆಹಲಿ: 2029ರ ವೇಳೆಗೆ ಭಾರತ ದೇಶ ಆರ್ಥಿಕತೆಯಲ್ಲಿ ಪ್ರಗತಿ ಕಂಡುಬಂದು ವಿಶ್ವದ 3ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡೆಸಿದ ಸಂಶೋಧನಾ ವರದಿಯೊಂದರಲ್ಲಿ ತಿಳಿಸಿದೆ.
Advertisement
ಎಸ್ಬಿಐ ನಡೆಸಿದ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿರುವಂತೆ ಭಾರತದ ಆರ್ಥಿಕತೆ ವೇಗವಾಗಿ ಪ್ರಗತಿ ಕಾಣುತ್ತಿದೆ. ಈಗಾಗಲೇ ಭಾರತದ ಆರ್ಥಿಕತೆ 2014 ರಿಂದ 7 ಸ್ಥಾನ ಮೇಲೇರಿದೆ. ಭಾರತದ ಜಿಡಿಪಿ Q1FY23ಯು 13.5 ಏರಿಕೆ ಕಂಡಿದ್ದು, ಇದು ಪ್ರಸಕ್ತ ಅತ್ಯಂತ ವೇಗವಾಗಿ ಏರಿಕೆ ಕಂಡ ಆರ್ಥಿಕತೆಯಾಗಿದೆ. ಇದನ್ನೂ ಓದಿ: ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ
Advertisement
Advertisement
ಈಗಾಗಲೇ ಯುನೈಟೆಡ್ ಕಿಂಗ್ಡಮ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. 2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಇದನ್ನೂ ಓದಿ: ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು 4 ಲಕ್ಷ ರೂ. ಖರ್ಚು!
Advertisement
ಯುಕೆ ಎರಡನೇ ತ್ರೈಮಾಸಿಕದಲ್ಲಿ ಶೇ.1 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಇದು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ. ಭಾರತದ ರೂಪಾಯಿ ಮುಂದೆ ಪೌಂಡ್ ಮೌಲ್ಯ ಈ ವರ್ಷ ಶೇ.8ರಷ್ಟು ಕುಸಿತ ಕಂಡಿದೆ. ದಶಕಗಳ ಹಿಂದೆ ವಿಶ್ವದ ದೊಡ್ಡ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದ್ದರೆ ಯುಕೆ 5ನೇ ಸ್ಥಾನ ಪಡೆದಿತ್ತು. ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕ, ಚೀನಾ, ಜಪಾನ್, ಜರ್ಮನಿ ನಂತರದ ಸ್ಥಾನವನ್ನು ಭಾರತ ಪಡೆದಿದೆ.