ಕೊಲಂಬೋ: ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ ಸಿಕ್ಸ್ ಗೆ ಖುಷಿಯಾಗಿ ಕಾಮೆಂಟರಿ ಬಾಕ್ಸ್ ನಲ್ಲಿಯೇ ಮಾಜಿ ನಾಯಕ ಸುನಿಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4 ವಿಕೆಟ್‍ಗಳ ಅಂತರದಿಂದ ಸೋಲಿಸುವ ಮೂಲಕ ರೋಚಕ ಗೆಲುವನ್ನು ಸಹ ಪಡೆ ದುಕೊಂಡಿತ್ತು. ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಸ್ತುಫಿಜುರ್ ರಹಿಮ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ನಾಗಿನ್ ಡ್ಯಾನ್ಸ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದರು. ಹೀಗೆ ನಂತರ ಹಲವು ಬಾರಿ ಆಟಗಾರರು ಮೈದಾನದಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ರು.
Advertisement
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಅಭಿಮಾನಿಗಳು ರೋಹಿತ್ ಶರ್ಮಾರ ಹೊಡೆತಗಳಿಗೆ ನಾಗಿನ್ ಡ್ಯಾನ್ಸ್ ಮಾಡುತ್ತಿದ್ರು. ಇದೇ ವೇಳೆ ಕಾಮೆಂಟ್ರಿ ಬಾಕ್ಸ್ ನಲ್ಲಿದ್ದ ಸುನಿಲ್ ಗವಾಸ್ಕರ್ ಸಹ ನಾಗಿನ್ ಡ್ಯಾನ್ಸ್ ಮಾಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ರು.
Advertisement
ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು.
Advertisement
ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.
Advertisement
Naagin dance performed by our Cricket experts…Take a bow #SunilGavaskar Sir !! ???????????? #INDvBAN #NidahasOnDSport #NidahasTrophy2018Final #SunilGavaskar pic.twitter.com/piad8GikZJ
— Aritra Dey (@Captain_akshay) March 18, 2018
https://twitter.com/DSportINLive/status/975406453992443904
Nagin dance ???? wasn't famous this much. It's gone viral. Look at the guys. But Sunil Gavaskar is my favorite. What's yours!#INDvBAN #BANvIND #NidahasTrophy2018 #NidahasTrophy pic.twitter.com/2LjaXPXkgl
— BlueCap ???????? (@IndianzCricket) March 18, 2018
People are going mad with Nagin Dance ???? in the stadium.#INDvBAN #BANvIND #NidahasTrophy2018 #NidahasTrophy pic.twitter.com/XyYE4Pfnzf
— BlueCap ???????? (@IndianzCricket) March 18, 2018
The moment the world of Cricket will try to forget. The moment which insulted the spirit of the game. The moment which killed @BCBtigers dignity. The moment which converted the match into a black day of Cricket History. #SLvsBAN #INDvsBAN #NidahasTrophy2018 #NidahasTrophy pic.twitter.com/EoLsEbthGF
— BlueCap ???????? (@IndianzCricket) March 19, 2018