ನ್ಯೂಯಾರ್ಕ್: ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್‍ನಲ್ಲಿರುವ ವಿಶ್ವಸಂಸ್ಥೆಯ ಮಿಷನ್‍ನ ಫೋರ್ಸ್ ಕಮಾಂಡರ್ (ಯುಎನ್‍ಎಂಐಎಸ್‍ಎಸ್) ಆಗಿ ನೇಮಕ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ತಿಳಿಸಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಅವರು ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್‍ನಲ್ಲಿರುವ ವಿಶ್ವಸಂಸ್ಥೆಯ ಮಿಷನ್‍ನ ಹೊಸ ಫೋರ್ಸ್ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು. ಈ ಹಿಂದೆ ಯುಎನ್‍ಎಂಐಎಸ್‍ಎಸ್ ಫೋರ್ಸ್ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನಾಯ್ಕರ್ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಮೋಹನ್ ಸುಬ್ರಮಣಿ ಅವರನ್ನು ಆಯ್ಕೆ ಮಾಡಲಾಯಿತು.
ಲೆಫ್ಟಿನೆಂಟ್ ಜನರಲ್ ಸುಬ್ರಮಣಿಯನ್ ಅವರು ಕಳೆದ 36 ವರ್ಷಗಳಿಂದ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಇತ್ತೀಚೆಗೆ ಮಧ್ಯ ಭಾರತದಲ್ಲಿ ಸೇನಾ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಐಸಿಯುವಿನಲ್ಲಿ ಲಾಲು ಪ್ರಸಾದ್ ಯಾದವ್‍ಗೆ ಚಿಕಿತ್ಸೆ – ಆರೋಗ್ಯ ವಿಚಾರಿಸಿದ ಮೋದಿ
ಈ ಹಿಂದೆ, ಅವರು ರಕ್ಷಣಾ ಸಚಿವಾಲಯದ ಸಂಯೋಜಿತ ಪ್ರಧಾನ ಕಚೇರಿಯಲ್ಲಿ ಸಂಗ್ರಹಣೆ ಮತ್ತು ಸಲಕರಣೆ ನಿರ್ವಹಣೆಗಾಗಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾಕ್ಕೆ ಭಾರತದ ರಕ್ಷಣಾ ಸಹಾಯಕರಾಗಿ ಮತ್ತು 2000ರಲ್ಲಿ ಸಿಯೆರಾ ಲಿಯೋನ್‍ನಲ್ಲಿ ವಿಶ್ವಸಂಸ್ಥೆಯ ಮಿಷನ್‍ನಲ್ಲಿ ಸಿಬ್ಬಂದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಬಿಸಿ – ಗೃಹಬಳಕೆಯ LPG ಸಿಲಿಂಡರ್ ಬೆಲೆ 50 ರೂ. ಏರಿಕೆ
ಏನಿದು ಸುಡಾನ್ ಮಿಷನ್?: ಸುಡಾನ್‍ನ ಡಾರ್ಫುರ್ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಬುಡಕಟ್ಟು ಜನಾಂಗದ ಸಂಘರ್ಷದಲ್ಲಿ ಸುಮಾರು 100 ಮಂದಿ ಆಗಮಿಸಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕ ಮಾಹಿತಿ ನೀಡಿತ್ತು. ಅರಬ್ ಮತ್ತು ಆಫ್ರಿಕನ್ ಬುಡಕಟ್ಟು ಗುಂಪಿನ ನಡುವೆ ಭೂಮಿ ವಿಚಾರವಾಗಿ ಸಂಘರ್ಷ ಆರಂಭವಾಗಿತ್ತು. ಬಳಿಕ ಸ್ಥಳೀಯ ಉಗ್ರರು ಡಾರ್ಫುರ್ ಪ್ರದೇಶದ ಹಲವು ಗ್ರಾಮಗಳ ಮೇಲೆ ದಾಳಿ ನಡೆಸಿದ್ದರು. ಇದರಿಂದ ಸಾವಿರಾರು ಮಂದಿ ಅಲ್ಲಿಂದ ಪಲಾಯನ ಮಾಡಿದ್ದರು.