ಲಂಡನ್: ವಿಶ್ವ ಬ್ಯಾಂಕ್‍ನ ವಿದ್ಯುತ್ ಲಭ್ಯತೆ ಶ್ರೇಯಾಂಕದಲ್ಲಿ 2015ರಲ್ಲಿ 99ನೇ ಸ್ಥಾನದಲ್ಲಿದ್ದ ಭಾರತ ಈಗ 26ನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ನಮ್ಮ ಶ್ರೇಯಾಂಕ 99 ರಿಂದ 26ಕ್ಕೆ ಏರಿದೆ. ಪ್ರತಿ ಮನೆಗೆ ವಿದ್ಯುತ್ ಸೌಲಭ್ಯ ಸಿಗಬೇಕು, ಸುಲಭವಾಗಿ ವಿದುತ್ ಲಭ್ಯವಾಗಬೇಕು ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕು ಎಂಬ ಪ್ರಧಾನ ಮಂತ್ರಿಯವರ ಉದ್ದೇಶ ಇದರಿಂದ ಮತ್ತಷ್ಟು ವೇಗವಾಗಲಿದೆ ಎಂದು ಅವರು ಹೇಳಿದ್ದಾರೆ.
Advertisement
2019ರ ವೇಳೆಗೆ, ಉದ್ದೇಶಿತ ಸಮಯಕ್ಕಿಂತ ಮೂರು ವರ್ಷ ಮುಂಚಿತವಾಗಿಯೇ ಸರ್ಕಾರ ಪ್ರತಿ ಮನೆಗೆ ವಿದ್ಯುತ್ ಸೌಲಭ್ಯ ಒದಗಿಸಬಲ್ಲದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಯಾವುದೇ ವ್ಯಕ್ತಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಅನಕೂಲಕರವಾಗಿರಬೇಕು. ಮೂಲಸೌಕರ್ಯಗಳು ಲಭ್ಯವಿದ್ದಲ್ಲಿ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಸಿಗಬೇಕು. ಮೂಲ ಸೌಕರ್ಯದ ವ್ಯವಸ್ಥೆ ಮಾಡಬೇಕಿದ್ದರೆ ಒಂದು ವಾರದ ಒಳಗಾಗಿ ವಿದ್ಯುತ್ ಸಂಪರ್ಕ ಸಿಗಬೇಕು ಎಂದು ಪಿಯೂಶ್ ಗೋಯಲ್ ಹೇಳಿದ್ರು.
Advertisement
ಮೇ 11ರಂದು ನಡೆದ ವಿಯನ್ನಾ ಎನರ್ಜಿ ಫೋರಂನಲ್ಲಿ ಎಲ್ಲರೂ ಭರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಅಂತ ತಿಳಿಸಿದ್ರು.
Advertisement
ಸರ್ಕಾರದ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಒಟ್ಟು 18,452 ಗ್ರಾಮಗಳಲ್ಲಿ 13 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲಿಪಿಸಲಾಗಿದೆ. ಉಳಿದ ಭಾಗವನ್ನು ಮುಂದಿನ 1 ಸಾವಿರ ದಿನದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.
Spoke about India's record breaking progress on energy access at Vienna Energy Forum and urged the developed world to meet its commitments. pic.twitter.com/vfRPQjnwCK
— Piyush Goyal (@PiyushGoyal) May 11, 2017
Transformative policies of Govt. are fulfilling entrepreneurial dreams and taking a step towards #MakeInIndiahttps://t.co/lOcFtbSeXU pic.twitter.com/1ZCCd8KaMG
— Piyush Goyal (@PiyushGoyal) May 8, 2017