– ನಾವು ಶ್ರೀರಾಮಚಂದ್ರನ ಶತ್ರುಗಳು ಎಂದ ಸಂಸದ ಎ.ರಾಜ
ನವದೆಹಲಿ: ಭಾರತ (India) ದೇಶವಲ್ಲ. ನಾವು ಜೈ ಶ್ರೀರಾಮ್ (Jai Shree Ram) ಘೋಷಣೆಯನ್ನು ಒಪ್ಪಲ್ಲ ಎಂದು ಹಿಂದೂ ಧರ್ಮ ಮತ್ತು ಸನಾತನದ (Sanatan) ಬಗ್ಗೆ ಹೇಳಿಕೆ ನೀಡಿ ಡಿಎಂಕೆ (DMK) ಸಂಸದ ಎ.ರಾಜ (A.Raja) ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಮಧುರೈನಲ್ಲಿ ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಬಗ್ಗೆ ಮಾತನಾಡಿದ ಅವರು, ನಾವು ಶ್ರೀರಾಮನ ಶತ್ರುಗಳು. ನಾವು ರಾಮಾಯಣದಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳದವರು. ಜೈ ಶ್ರೀರಾಮ್ ಎನ್ನುತ್ತಾರೆ, ‘ಛೀ’ ಎಂದು ಕಟುವಾಗಿ ಟೀಕಿಸಿದರು. ಅಲ್ಲದೇ ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಒಪ್ಪಲ್ಲ. ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 24, ಕಾಂಗ್ರೆಸ್ ಗೆಲ್ಲಲಿದೆ 4 ಸ್ಥಾನ
Advertisement
The hate speeches from DMK’s stable continue unabated. After Udhayanidhi Stalin’s call to annihilate Sanatan Dharma, it is now A Raja who calls for balkanisation of India, derides Bhagwan Ram, makes disparaging comments on Manipuris and questions the idea of India, as a nation.… pic.twitter.com/jgC1iOA5Ue
— Amit Malviya (मोदी का परिवार) (@amitmalviya) March 5, 2024
Advertisement
ದೇಶವೆಂದರೆ ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಹಲವಾರು ಸಂಪ್ರದಾಯ ಮತ್ತು ಸಂಸ್ಕೃತಿಗಳಿವೆ. ಹಾಗಾಗಿ ಭಾರತ ದೇಶವಲ್ಲ. ಭಾರತ ಒಂದು ಉಪಖಂಡ. ತಮಿಳುನಾಡೇ ಒಂದು ದೇಶ, ಕೇರಳವೇ ಒಂದು ದೇಶ. ಒರಿಯಾವೇ ಒಂದು ದೇಶ, ಒಂದು ನಾಡು. ಈ ಎಲ್ಲಾ ದೇಶಗಳು ಸೇರಿ ಭಾರತವಾಗಿದೆ. ಹೀಗಾಗಿ ಭಾರತ ಒಂದು ಉಪಖಂಡ ಎಂದರು. ಅವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ
Advertisement
ಈ ಕುರಿತು ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ (Amit Malviya), ಡಿಎಂಕೆ ನಾಯಕ ಭಾರತದ ವಿಭಜನೆಗೆ ಕರೆ ನೀಡಿದ್ದು, ಭಗವಾನ್ ರಾಮನನ್ನು ಅಪಹಾಸ್ಯ ಮಾಡಿದ್ದಾರೆ. ಅಲ್ಲದೇ ಮಣಿಪುರಿಗಳ ಬಗ್ಗೆ ಅವಹೇಳನಾಕಾರಿ ಕಾಮೆಂಟ್‌ಗಳನ್ನು ಮಾಡಿ ಭಾರತದ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ
ಈ ಹಿಂದೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿ ಲೇವಡಿ ಮಾಡಿದ್ದರು. ಅವರ ಈ ವಿವಾದಾತ್ಮಕ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: 140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು