ಚಿಕ್ಕಬಳ್ಳಾಪುರ: ಭಾರತ ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿರುವ ದೇವರು ಒಂದೇ ಆಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.
ಮುದ್ದೇನಹಳ್ಳಿಯಲ್ಲಿ ಮಾತನಾಡಿದ ಅವರು, ಆಧ್ಯಾತ್ಮಿಕ ಭಾರತ ಮಾತ್ರವೇ ಪ್ರಪಂಚದ ಸರ್ವಶ್ರೇಷ್ಟ ಭಾರತ. ಭಾರತ ಹಿಂದೂ ರಾಷ್ಟವಾಗಿದ್ದು, ಇಲ್ಲಿರುವ ದೇವರು ಒಂದೇ ಆಗಿದೆ. ಕೆಲವರು ಗೊಂದಲ ಮೂಡಿಸುತ್ತಾರೆ. ಸತ್ಯ, ಕರುಣೆ, ಪ್ರೇಮ ಭಾರತದ ಆತ್ಮವಾಗಬೇಕಿದೆ. ಒಳ್ಳೆಯ ಕೆಲಸ ಮಾಡಲು ಯಾರ ಅಂಜಿಕೆ, ಅಣತಿ ಬೇಕಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು: ಕಾಂಗ್ರೆಸ್ ಟೀಕೆ
Advertisement
Advertisement
ಸ್ವೇಚ್ಛಾಚಾರ ವಿಶ್ವದಲ್ಲಿ ಬಹುದೊಡ್ಡ ಸಮಸ್ಯೆಯನ್ನು ಉಂಟು ಮಾಡಿದೆ. ಭಾಷೆ ಹಾಗೂ ಪೂಜೆಗಳು ಬೇರೆ ಬೇರೆ. ಆದ್ರೆ ಸಮಸ್ಯೆಗಳು ಒಂದೇ ಆಗುತ್ತವೆ. ಶಿಕ್ಷೆಯಿಂದ ಬದಲಾವಣೆ ಅಸಾದ್ಯ. ಬದುಕುವುದಕ್ಕಾಗಿ ಜೀವಿಸುವುದು ವ್ಯರ್ಥ. ಪರೋಪಕಾರಕ್ಕಾಗಿ ಬದುಕುವುದೇ ಶ್ರೇಷ್ಟ ಎಂದು ಹೇಳಿದರು.
Advertisement
ವಿಜ್ಞಾನ ಮತ್ತು ಪರಂಪರೆಯನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಆಗಬೇಕಿದೆ. ಕೆಲಸ ಮಾಡುವಾಗ ಯೋಚಿಸಿ ಮಾಡಬೇಕು. ಭೌತಿಕವಾಗಿ ಭಾರತವನ್ನು ಬಲಿಷ್ಠಗೊಳಿಸುವಂತೆ, ಮಾನಸಿಕವಾಗಿಯೂ ಸಮರ್ಥವಾಗಿ ಕಟ್ಟಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಊಟ ಬಿಟ್ಟು ಮರವಂತೆಗೆ ಸಿಎಂ ದೌಡಾಯಿಸಿದ್ದು ಯಾಕೆ?