ದುಬೈ: ಚಾಂಪಿಯನ್ಸ್ ಫೈನಲ್‌ಗೆ ಟೀಂ ಇಂಡಿಯಾ (Team India) ಪ್ರವೇಶಿಸಿದ್ದು ಭಾರತದ ಪರ ರೋಹಿತ್ ಶರ್ಮಾ (Rohit Sharma) ದಾಖಲೆ ಬರೆದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ವಿಶ್ವಕಪ್, ಟಿ20, ಚಾಂಪಿಯನ್ಸ್ ಟ್ರೋಫಿ (ICC Champions Trophy) ಫೈನಲ್‌ವರೆಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ.
Advertisement
ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ (Australia) 264 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಹೊಡೆಯುವ ಮೂಲಕ ಫೈನಲ್ ಪ್ರವೇಶಿಸಿತು. ಇದನ್ನೂ ಓದಿ: ಬಲಿಷ್ಠ ಆಸ್ಟ್ರೇಲಿಯಾ ಬಗ್ಗು ಬಡಿದು ಫೈನಲ್ ಪ್ರವೇಶಿಸಿದ ಭಾರತ
Advertisement
Advertisement
SMASHED IT!
Rohit Sharma’s boundary has everyone thinking, should umpires start wearing helmets?#ChampionsTrophyOnJioStar 👉 🇮🇳🆚🇦🇺 LIVE NOW on Star Sports 1, Star Sports 1 Hindi, Star Sports 2 & Sports18-1!
📺📱 Start Watching FREE on JioHotstar: https://t.co/B3oHCeWFge pic.twitter.com/cAbrKgMezk
— Star Sports (@StarSportsIndia) March 4, 2025
Advertisement
ಲಾಹೋರ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿಜೇತರಾದವರು ಭಾನುವಾರ ದುಬೈ ಮೈದಾನದಲ್ಲೇ ಭಾರತವನ್ನು ಎದುರಿಸಲಿದೆ.
4 ಫೈನಲ್ ಪಂದ್ಯಗಳು:
2023 – ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ 209 ರನ್‌ಗಳಿಂದ ಮಣಿಸಿತ್ತು. ಇದನ್ನೂ ಓದಿ: ಮೈದಾನದಲ್ಲೇ ಕುಲದೀಪ್‌ಗೆ ಕೊಹ್ಲಿ, ರೋಹಿತ್ ಕ್ಲಾಸ್!
2023 – ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತಿತ್ತು.
KL RAHUL FINISHES OFF IN STYLE!!!!! 🇮🇳
What a moment, what a win as #TeamIndia qualify for the #ChampionsTrophy final for the 5th time! 👏#ChampionsTrophyOnJioStar FINAL 👉 SUN, 9th March, 1:30 PM on Star Sports 1, Star Sports 1 Hindi, Star Sports 2 & Sports18-1!
📺📱 Start… pic.twitter.com/ymcT8TwJdA
— Star Sports (@StarSportsIndia) March 4, 2025
2024 – ವೆಸ್ಟ್ ಇಂಡಿಸ್‌ನಲ್ಲಿ ನಡೆದ ಟಿ20 ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಎರಡನೇ ಬಾರಿ ಟಿ20 ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
2025 – ದುಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.