ಏಷ್ಯನ್‌ ಗೇಮ್ಸ್‌; 100 ಪದಕ ಗೆದ್ದು ಇತಿಹಾಸ ಬರೆದ ಭಾರತ

Public TV
2 Min Read
asian games 1

ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2023ರಲ್ಲಿ (Asian Games) ಭಾರತ ಇತಿಹಾಸ ಸೃಷ್ಟಿಸಿದೆ. ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಸೆಂಚುರಿ ಬಾರಿಸಿದೆ. ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳನ್ನು (100 Medal Mark) ಜಯಿಸಿದ್ದಾರೆ.

ಭಾರತದ (India) ಕ್ರೀಡಾ ಪ್ರಾಧಿಕಾರವು ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ತನ್ನ 100 ಪದಕವನ್ನು ಪಡೆಯುತ್ತಿದ್ದಂತೆ ಇತಿಹಾಸವನ್ನು ನಿರ್ಮಿಸಲಾಗಿದೆ. ಟೀಮ್‌ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಕನಸುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್‌ ಗೇಮ್ಸ್‌ನಲ್ಲಿ ಸಿಕ್ಕಿವೆ. ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು. ಇದನ್ನೂ ಓದಿ: Asian Games 2023: ಅರ್ಚರಿಯಲ್ಲಿ ಚಿನ್ನ ಗೆದ್ದ ಭಾರತ

ಭಾರತ ತಂಡವು ಈ ಬಾರಿ ಅನೇಕ ಅಚ್ಚರಿಯ ಪದಕಗಳನ್ನು ಗೆದ್ದಿದೆ. ಮಹಿಳಾ ಟೇಬಲ್ ಟೆನಿಸ್‌ನಲ್ಲಿ ಸುತೀರ್ಥ ಮುಖರ್ಜಿ ಮತ್ತು ಅಯ್ಹಿಕಾ ಮುಖರ್ಜಿ ಕಂಚಿನ ಪದಕ ಗೆದ್ದರು. ಸೆಮಿಫೈನಲ್‌ನಲ್ಲಿ ಬಲಿಷ್ಠ ಚೀನಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ್ದು ವಿಶೇಷವಾಗಿತ್ತು.

ಜಾವೆಲಿನ್ ಎಸೆತದಲ್ಲಿ ಕಿಶೋರ್ ಕುಮಾರ್ ಜೆನಾ ಅವರ ಬೆರಗುಗೊಳಿಸುವ 86.77 ಮೀಟರ್ ಎಸೆತವು ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಗಮನ ಸೆಳೆದಿತ್ತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article