ದುಬೈ: ತನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡಿದವರಿಗೆ ರೋಹಿತ್ ಶರ್ಮಾ (Rohit Sharma) ಇಂದು ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಐಸಿಸಿ ಟೂರ್ನಿಗಳಲ್ಲೂ (ICC Tournament) ತಾನೊಬ್ಬ ಸಮರ್ಥ ನಾಯಕ ಎಂದು ತೋರಿಸಿಕೊಟ್ಟಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ 2023 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC World Cup) ಭಾರತ ಲೀಗ್ ಹಂತ 9 ಪಂದ್ಯಗಳನ್ನು ಗೆದ್ದಿತ್ತು. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳಿಂದ ಗೆದ್ದಿದ್ದ ಭಾರತ ಅಹಮಾದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು.
Advertisement
Advertisement
Advertisement
2024 ರಲ್ಲಿ ವೆಸ್ಟ್ ಇಂಡಿಸ್ ಮತ್ತು ಅಮೆರಿಕದಲ್ಲಿ ಟಿ20 (T20) ಟೂರ್ನಿ ನಡೆದಿತ್ತು. ಈ ಟೂರ್ನಿಯ ಎಲ್ಲಾ 9 ಪಂದ್ಯಗಳನ್ನು ಗೆದ್ದು ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ನನಸು – ಚಾಂಪಿಯನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!
Advertisement
ಈಗ ಪಾಕಿಸ್ತಾನ ಆಯೋಜಿಸಿದ ಚಾಂಪಿಯನ್ಸ್ ಟ್ರೋಫಿಯಲ್ಲೂ (Champions Trophy 2025) ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲೀಗ್‌ನ ಎಲ್ಲಾ 3 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಕೊಂಡಿದೆ.
ಐಸಿಸಿ ಏಕದಿನ ವಿಶ್ವಕಪ್‌ನ 10 ಪಂದ್ಯ, ಟಿ20 ವಿಶ್ವಕಪ್‌ನ 9 ಪಂದ್ಯ, ಚಾಂಪಿಯನ್ಸ್ ಟ್ರೋಫಿಯ ಎಲ್ಲಾ 5 ಪಂದ್ಯಗಳನ್ನು ರೋಹಿತ್ ನೇತೃತ್ವದಲ್ಲೇ ಭಾರತ ಜಯಗಳಿಸಿದೆ. ಈ ಮೂಲಕ ಐಸಿಸಿ ಟೂರ್ನಿಯ ಒಟ್ಟು 24 ಪಂದ್ಯಗಳ ಪೈಕಿ 23 ಪಂದ್ಯಗಳನ್ನು ರೋಹಿತ್ ಜಯಗಳಿಸಿದ್ದಾರೆ.
2022 ರಲ್ಲಿ ರೋಹಿತ್ ನೇತೃತ್ವದಲ್ಲೇ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಸೆಮಿಫೈನಲ್ ವರೆಗೆ ಬಂದಿತ್ತು. ಲೀಗ್‌ನ 5 ಪಂದ್ಯಗಳ ಪೈಕಿ 4 ರಲ್ಲಿ ಜಯಗಳಿಸಿದ್ದ ಭಾರತ ಸೆಮಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು.
ಇಂದಿನ ಪಂದ್ಯದಲ್ಲಿ 76 ರನ್(83 ಎಸೆತ, 7 ಬೌಂಡರಿ, 3 ಸಿಕ್ಸ್) ಹೊಡೆದು ಭಾರತಕ್ಕೆ ಕಪ್ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರೋಹಿತ್ ಶರ್ಮಾ ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
JADEJA FINISHES OFF IN STYLE! 🇮🇳
TEAM INDIA WIN THE CHAMPIONS TROPHY 2025 🏆#ChampionsTrophyOnJioStar #INDvNZ #ChampionsTrophy pic.twitter.com/ismVCQQndD
— Star Sports (@StarSportsIndia) March 9, 2025