ನವದೆಹಲಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ಅರ್ಥಶಾಸ್ತ್ರಜ್ಞರ ಸಮೀಕ್ಷೆ ತಿಳಿಸಿದೆ.
ಭಾರತದಲ್ಲಿ ಆರ್ಥಿಕ ಹಿಂಜರಿತ ಎದುರಿಸುವ ಪರಿಸ್ಥಿತಿ ಶೂನ್ಯ ಎಂದು ಹೇಳಿದೆ. ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.85ರಷ್ಟಿದೆ ಎಂದು ಅಂದಾಜಿಸಿದೆ.
Advertisement
All agencies are in favour of the Modi Govt’s economic policies. Bloomberg survey on recession probabilities tells that India has ZERO probability of slipping in recession.
But @INCIndia can’t see this as they are busy doing propaganda.pic.twitter.com/TRrh5RM90m
— Rahul Kumar Valmiki (@irahulvalmiki) July 26, 2022
Advertisement
ಯಾವ ದೇಶದಲ್ಲಿ ಎಷ್ಟು ಸಾಧ್ಯತೆ?
ಶ್ರೀಲಂಕಾ ಶೇ.85, ನ್ಯೂಜಿಲೆಂಡ್ ಶೇ.33, ದಕ್ಷಿಣ ಕೊರಿಯಾ ಶೇ.25, ಜಪಾನ್ ಶೇ.25, ಚೀನಾ ಶೇ.20, ಹಾಂಕಾಂಗ್ ಶೇ.20, ಆಸ್ಟ್ರೇಲಿಯಾ ಶೇ.20, ತೈವಾನ್ ಶೇ.20, ಪಾಕಿಸ್ತಾನ ಶೇ.20, ಮಲೇಷ್ಯಾ ಶೇ.20, ವಿಯೆಟ್ನಾಂ ಶೇ.10, ಥೈಲ್ಯಾಂಡ್ ಶೇ.10, ಫಿಲಿಪೈನ್ಸ್ ಶೇ.8, ಇಂಡೋನೇಷ್ಯಾ ಶೇ.3 ಎಂದಿದೆ.
Advertisement
ಆರ್ಥಿಕವಾಗಿ ಮುಂದುವರಿದ ದೇಶಗಳ ಪೈಕಿ ಇಟಲಿ ಶೇ.65, ಫ್ರಾನ್ಸ್ ಶೇ.50, ಜರ್ಮನಿ ಶೇ.45, ಇಂಗ್ಲೆಂಡ್ ಶೇ.45, ಅಮೆರಿಕ ಶೇ.40, ಜಪಾನ್ ಶೇ.25, ಚೀನಾದಲ್ಲಿ ಶೇ. ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.20 ರಷ್ಟಿದೆ.
Advertisement
Recession probabilities for the world's 8 biggest economies.
Italy – 65%
France – 50%
Germany – 45%
UK – 45%
US – 40%
Japan – 25%
China – 20%
INDIA – 0%
Source : Bloomberg pic.twitter.com/fAygahF7vk
— narne kumar06 (@narne_kumar06) July 25, 2022
ಯುರೋಪ್ ಮತ್ತು ಅಮೆರಿಕ ಖಂಡದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.
ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹಿಂಜರಿತವಾದರೂ ಕಡಿಮೆ ಸಮಯದವರೆಗೆ ಇರಲಿದೆ. ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಏರಿಕೆಯಾಗಿರುವ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಬೆಲೆ ಏರಿಕೆ ಮತ್ತು ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಸಿದೆ. ಬಡ್ಡಿ ದರ ಏರಿಸಿದ ಪರಿಣಾಮ ವಿಶ್ವಾದ್ಯಂತ ಕರೆನ್ಸಿಗಳ ಮುಂದೆ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ. ಹೀಗಿದ್ದರೂ ಮುಂದಿನ ವರ್ಷ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್
ಸಾಮಾಜಿಕ ಜಾಲತಾಣದಲ್ಲಿ ಈಗ ಆರ್ಥಿಕ ಹಿಂಜರಿತ( Recession) ಟ್ರೆಂಡಿಂಗ್ ಟಾಪಿಕ್ ಆಗಿದೆ.