ನವದೆಹಲಿ: ರಾಜಕೀಯ ವಿಜ್ಞಾನಕ್ಕಿಂತ (Political Science) ಇಂದು ಎಲೆಕ್ಟ್ರಿಷಿಯನ್‌ಗಳು ಮತ್ತು ಪ್ಲಂಬರ್‌ಗಳು ಅಗತ್ಯ ಹೆಚ್ಚಿದೆ ಎಂಬ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಅವರ ಅಭಿಪ್ರಾಯಕ್ಕೆ ಭಾರತ ಮೂಲದ ಟೆಕ್ ಕಂಪನಿ ಜೋಹೊ ಸಿಇಒ ಶ್ರೀಧರ್ ವೆಂಬು (Zoho CEO Sridhar Vembu ) ಸಹಮತ ವ್ಯಕ್ತಪಡಿಸಿದ್ದಾರೆ.
ಎಲೋನ್ ಮಸ್ಕ್ ಅವರು ಹೆಚ್ಚುತ್ತಿರುವ ರಾಜಕೀಯ ವಿಜ್ಞಾನ ವಿಷಯಗಳಿಗಿಂತ ಎಲೆಕ್ಟ್ರಿಷಿಯನ್‌ಗಳು (Electricians) ಮತ್ತು ಪ್ಲಂಬರ್‌ಗಳು (Plumbers) ಬಹಳ ಮುಖ್ಯ. ತಮ್ಮ ಕೈಯಿಂದ ಕೆಲಸ ಮಾಡುವ ಈ ಜನರ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
Advertisement
Elon Musk: Electricians and plumbers are a lot more important than incremental political science majors.
“I have a lot of respect for people who work with their hands.
We need electricians, plumbers, and carpenters. That’s a lot more important than having incremental political… pic.twitter.com/c97Oz0u69c
— ELON CLIPS (@ElonClipsX) December 1, 2024
ಮಸ್ಕ್ ಅವರ ಈ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೋಹೊ ಸಿಇಒ ಶ್ರೀಧರ್ ವೆಂಬು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ವೆಲ್ಡರ್‌ಗಳು ಮತ್ತು ನರ್ಸ್‌ಗಳು ಸೇರಿದಂತೆ ಕೈಯಲ್ಲಿ ಕೆಲಸ ಮಾಡುವ ಜನರನ್ನು ಭಾರತ ಗೌರವಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ – ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ
Advertisement
India has to value people who do hands-on work, including electricians, plumbers, welders and nurses. We need people who build things.
We do not need more Economics or Political Science or History majors. I study history, philosophy and economics but I would never want to get a… https://t.co/FOBLgdh4EX
— Sridhar Vembu (@svembu) December 2, 2024
Advertisement
ನಮಗೆ ಹೆಚ್ಚು ಅರ್ಥಶಾಸ್ತ್ರ ಅಥವಾ ರಾಜಕೀಯ ವಿಜ್ಞಾನ ಅಥವಾ ಇತಿಹಾಸದ ಮೇಜರ್‌ಗಳ ಅಗತ್ಯವಿಲ್ಲ. ನಾನು ಇತಿಹಾಸ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುತ್ತೇನೆ. ಆದರೆ ಅವುಗಳಲ್ಲಿ ಯಾವುದಾದರೂ ಪದವಿ ಪಡೆಯಲು ನಾನು ಎಂದಿಗೂ ಬಯಸುವುದಿಲ್ಲ. ಹೆಚ್ಚು ಹೆಚ್ಚು ಪದವಿ ಕಾಲೇಜುಗಳನ್ನು ತೆರೆಯುವುದರಿಂದ ಕೌಶಲ್ಯ ಸಿಗುವುದಿಲ್ಲ ಮತ್ತು ಅದು ಜೀವನೋಪಾಯವನ್ನು ನೀಡುವುದಿಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.