ಅಭಿನಂದನೆಗಳು ಇಂಡಿಯಾ – 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು

Public TV
1 Min Read
1 Billion Vaccinations Milestone India Corona Vaccine e1634792685490

ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಇಂದು ಮೈಲಿಗಲ್ಲು ಸೃಷ್ಟಿಸಿದೆ. ಇಂದು 100 ಕೋಟಿ (1 ಬಿಲಿಯನ್‌) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆ ಮಾಡಿದೆ.

ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಅಭಿನಂದನೆಗಳು ಇಂಡಿಯಾ. ಇದು ದೂರದೃಷ್ಟಿ ಹೊಂದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಫಲಿತಾಂಶ ಎಂದು ಟ್ವೀಟ್‌ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಭಾರತ ಸರ್ಕಾರ ಈ ವರ್ಷದ ಒಳಗಡೆ ಎಲ್ಲ 94 ಕೋಟಿ ವಯಸ್ಕ ಜನತೆಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಿದೆ. ಈ ಗುರಿಯನ್ನು ತಲುಪಲು ಲಸಿಕಾ ಮೇಳವನ್ನು ಆಯೋಜಿಸುತ್ತಿದೆ.

ನಿನ್ನೆ ಮಧ್ಯರಾತ್ರಿಯವರೆಗೂ 99,85,16,644 ಡೋಸ್ ಹಂಚಿಕೆ ಆಗಿತ್ತು. ಈ ಮೂಲಕ 9 ತಿಂಗಳಲ್ಲಿ 100 ಕೋಟಿ ಡೋಸ್ ನೀಡಿದ ಗರಿಮೆಗೆ ಭಾರತ ಪಾತ್ರವಾಗಿದೆ. ಚೀನಾ ನಂತರ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶ ಭಾರತವಾಗಿದೆ.‌

Vaccine 1 1 medium

ಜನವರಿ 16ರಂದು ಮೊದಲ ವ್ಯಾಕ್ಸಿನ್ ನೀಡಲಾಗಿತ್ತು. ಆ ಬಳಿಕ 100 ಕೋಟಿ ಲಸಿಕೆ ಪಡೆಯಲು 277 ದಿನ ಪಡೆದುಕೊಂಡಿದೆ. ದೇಶದ ಶೇ. 50ರಷ್ಟು ಮಂದಿಗೆ ಸಿಂಗಲ್ ಡೋಸ್ ಲಸಿಕೆ ಸಿಕ್ಕಿದರೆ ಶೇ.21ರಷ್ಟು ಮಂದಿಗೆ ಡಬಲ್ ಡೋಸ್ ಪೂರ್ಣವಾಗಿದೆ. 58,645 ಸರ್ಕಾರಿ, 2,019 ಖಾಸಗಿ ಕೇಂದ್ರ ಸೇರಿ ಒಟ್ಟು 60,664 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಇದನ್ನೂ ಓದಿ: ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

ಟಾಪ್ 5 ವ್ಯಾಕ್ಸಿನ್ ರಾಜ್ಯಗಳು
ಉತ್ತರ ಪ್ರದೇಶ -12,19,47,031
ಮಹಾರಾಷ್ಟ್ರ – 9,28,41,727
ಪಶ್ಚಿಮ ಬಂಗಾಳ – 6,85,12,831
ಗುಜರಾತ್ – 6,76,67,794
ಕರ್ನಾಟಕ – 6,15,62,329 (8ನೇ ಸ್ಥಾನ)

Share This Article
Leave a Comment

Leave a Reply

Your email address will not be published. Required fields are marked *