ದೇಶದಲ್ಲಿ 800 ರ ಆಸುಪಾಸಿನಲ್ಲಿ ಓಮಿಕ್ರಾನ್ – ದೆಹಲಿಯಲ್ಲಿ ದಾಖಲೆಯ 238 ಕೇಸ್

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂದು ಒಟ್ಟು ಪ್ರಕರಣಗಳ ಸಂಖ್ಯೆ 800 ರ ಆಸುಪಾಸಿನಲ್ಲಿದೆ. ಕೇವಲ ದೆಹಲಿಯೊಂದರಲ್ಲೇ ಒಮಿಕ್ರಾನ್ ಸೋಂಕಿತರ ಸಂಖ್ಯೆ ಒಂದೇ ದಿನ ದಾಖಲೆಯ 238ಕ್ಕೆ ಏರಿದೆ.
ಮಹಾರಾಷ್ಟ್ರದಲ್ಲಿ 167 ಕೇಸ್ ಇವೆ. ಗುಜರಾತ್ 73, ಕೇರಳದಲ್ಲಿ 65, ತೆಲಂಗಾಣದಲ್ಲಿ 62, ರಾಜಸ್ಥಾನದಲ್ಲಿ 46, ಕರ್ನಾಟಕದಲ್ಲಿ 38 ಕೇಸ್ ದಾಖಲಾಗಿವೆ. 781 ಸೋಂಕಿತರ ಪೈಕಿ 241 ಮಂದಿ ಚೇತರಿಸಿಕೊಂಡಿದ್ದಾರೆ. ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಮೂರನೇ ಅಲೆ ದೆಹಲಿ ಮತ್ತು ಮುಂಬೈನಲ್ಲಿ ಆರಂಭವಾಯ್ತು ಎನ್ನುವ ಅನುಮಾನ ಆರಂಭವಾಗಿದೆ. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು
ಈ ಮಧ್ಯೆ ದೆಹಲಿಯಲ್ಲಿ ಇಂದಿನಿಂದ ಯಲ್ಲೋ ಅಲರ್ಟ್ ಜಾರಿಗೆ ಬಂದಿದೆ. ನೈಟ್ ಕರ್ಫ್ಯೂ ಜೊತೆಗೆ ಸ್ಕೂಲ್, ಕಾಲೇಜ್, ಜಿಮ್, ಸಿನಿಮಾ ಹಾಲ್ ಬಂದ್ ಮಾಡಲಾಗಿದೆ. ಬಸ್, ಮೆಟ್ರೋಗಳಲ್ಲಿ ಶೇಕಡಾ 50ರಷ್ಟು ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ರಷ್ ಕಂಡು ಬರುತ್ತಿದೆ. ಕೆಲ ಮೆಟ್ರೋ ಸ್ಟೇಷನ್‍ಗಳ ಮುಂದೆಯಂತೂ ಸುಮಾರು ಎರಡು ಕಿಲೋಮೀಟರ್ ಉದ್ದದ ಕ್ಯೂ ಕಂಡುಬಂತು. ಮೆಟ್ರೋ ಹತ್ತಲು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಉದ್ಭವಿಸಿದೆ. ಇದನ್ನೂ ಓದಿ: ಹೊಟ್ಟೆಯಲ್ಲಿ 1 ಕೆ.ಜಿ ಕೊಕೇನ್ ಬಚ್ಚಿಟ್ಟು ಪ್ರಯಾಣ – ವಿದೇಶಿ ಮಹಿಳೆ ಅರೆಸ್ಟ್
ದೆಹಲಿ ಅಲ್ಲದೇ ಮಹಾರಾಷ್ಟ್ರದಲ್ಲಿ 167 ಪ್ರಕರಣಗಳು ವರದಿಯಾಗಿದ್ದು, 72 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಹೊಸ ವರ್ಷಾಚರಣೆಯನ್ನು ಸಾಮೂಹಿಕವಾಗಿ ಆಚರಿಸಲು ಸರ್ಕಾರ ಬ್ರೇಕ್ ಹಾಕಿದೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಮುಂಬೈ, ದೆಹಲಿಯಲ್ಲಿ ಸೋಂಕು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.