– ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ
– ಕ್ವಾಡ್ ಸಭೆಯಲ್ಲಿ ಭಾಗಿಯಾಗಲು ಟ್ರಂಪ್‌ಗೆ ಆಹ್ವಾನ
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಕುರಿತು ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ (Ceasefire) ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಜಿ7 ಶೃಂಗಸಭೆಗೆ ಭೇಟಿ ನೀಡಿದ್ದ ವೇಳೆ ಅಮೆರಿಕಗೆ ಭೇಟಿ ನೀಡುವಂತೆ ಟ್ರಂಪ್ ಮೋದಿಯನ್ನು (Narendra Modi) ಆಹ್ವಾನಿಸಿದ್ದರು. ಆದರೆ ಮೊದಲೇ ವೇಳಾಪಟ್ಟಿ ನಿಗದಿಯಾಗಿದ್ದ ಹಿನ್ನೆಲೆ ಅಮೆರಿಕಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಬಳಿಕ ದೂರವಾಣಿ ಮೂಲಕ ಟ್ರಂಪ್‌ಗೆ ಕರೆ ಮಾಡಿದ ಮೋದಿ, ಆಪರೇಷನ್ ಸಿಂಧೂರದ (Operation Sindoor) ಬಳಿಕ ಭಾರತ ಹಾಗೂ ಪಾಕ್ ನಡುವೆ ಕದನ ವಿರಾಮ ಘೋಷಣೆ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ
ಪಾಕ್ ಮನವಿ ಬಳಿಕ ಭಾರತ ಪರಸ್ಪರ ಹೊಂದಾಣಿಕೆಯೊಂದಿಗೆ ಕದನ ವಿರಾಮ ಘೋಷಿಸಿದೆ. ಇದರಲ್ಲಿ ಯಾವ ದೇಶದ ಮಧ್ಯಸ್ಥಿಕೆಯೂ ಇರಲಿಲ್ಲ. ಯಾವುದೇ ವ್ಯಾಪಾರ ಒಪ್ಪಂದದ ಬಗ್ಗೆಯೂ ಚರ್ಚಿಸಿಲ್ಲ. ಭಾರತವು ಇನ್ನುಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವಾಗಿ ನೋಡುವುದಿಲ್ಲ, ಬದಲಿಗೆ ಯುದ್ಧವಾಗಿ ನೋಡುತ್ತದೆ. ಭಾರತದ ಆಪರೇಷನ್ ಸಿಂಧೂರ ಇನ್ನೂ ಮುಂದುವರಿಯುತ್ತದೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಬೆಂಗಳೂರು | ಮರದ ಕೊಂಬೆ ಬಿದ್ದು ಆಸ್ಪತ್ರೆ ಸೇರಿದ್ದ ಯುವಕನ ಬ್ರೈನ್ ಡೆಡ್
ಸುಮಾರು 35 ನಿಮಿಷಗಳ ಕಾಲ ಟ್ರಂಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದರು. ಇದೇ ವೇಳೆ ಕ್ವಾಡ್ ಸಭೆಗೆ ಭಾಗಿಯಾಗಲು ಭಾರತಕ್ಕೆ ಬರುವಂತೆ ಟ್ರಂಪ್‌ಗೆ ಮೋದಿ ಮನವಿ ಮಾಡಿದ್ದು, ಮೋದಿ ಆಹ್ವಾನವನ್ನು ಟ್ರಂಪ್ ಸ್ವೀಕರಿಸಿದ್ದಾರೆ. ಈ ಮೊದಲು ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಇದೀಗ ಟ್ರಂಪ್‌ಗೆ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಮೊಬೈಲ್‌ನಲ್ಲಿ 13,500 ಅಶ್ಲೀಲ ಚಿತ್ರ – ಫೇಕ್ ಅಕೌಂಟ್‌ನಿಂದ ಮಹಿಳೆಯರ ಮಾನಹಾನಿ ಮಾಡ್ತಿದ್ದ ಕಾಮುಕ ಅರೆಸ್ಟ್