ನವದೆಹಲಿ: ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ (SM Krishna) ಅವರ ನಿಧನದಿಂದ ಭಾರತ ಒಬ್ಬ ದಿಟ್ಟ ಮತ್ತು ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಸಂತಾಪ ಸೂಚಿಸಿದರು.
ನವದೆಹಲಿಯಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಎಸ್.ಎಂ.ಕೃಷ್ಣ ಅವರು ಬ್ರ‍್ಯಾಂಡ್ ಬೆಂಗಳೂರಿನ ರೂವಾರಿ. ಬೆಂಗಳೂರಿಗೆ ಜಾಗತಿಕ ಗುರುತು ನೀಡಿದವರೆ ಇವರು. ಕೃಷ್ಣ ಅವರ ನಿಧನದಿಂದ ಕರ್ನಾಟಕ ಮಾತ್ರವಲ್ಲ ಇಡೀ ರಾಷ್ಟ್ರಕ್ಕೇ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.ಇದನ್ನೂ ಓದಿ: ಎಸ್.ಎಂ ಕೃಷ್ಣ ನಿಧನಕ್ಕೆ ಆರ್‌ಎಸ್‌ಎಸ್ ಸಂತಾಪ
Advertisement
Advertisement
ಸೌಜನ್ಯ – ಸೌಹಾರ್ದ ರಾಜಕಾರಣಿ:
ಎಸ್.ಎಂ.ಕೃಷ್ಣ ಅವರು ಒಬ್ಬ ಅನುಭವಿ, ಸೌಮ್ಯ ಮತ್ತು ಸೇವಾ ಸಮರ್ಪಿತ ರಾಜಕಾರಣಿ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸಿಎಂ ಆಗಿದ್ದರೂ ಕೇಂದ್ರದೊಂದಿಗೆ ಸೌಜನ್ಯ, ಸೌಹಾರ್ದದಿಂದ ನಡೆದುಕೊಂಡಂತಹ ಸೌಮ್ಯ ರಾಜಕಾರಣಿಯಾಗಿದ್ದವರು. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ದೇಶದ ವಿದೇಶಾಂಗ ಮಂತ್ರಿ, ರಾಜ್ಯಪಾಲ ಹೀಗೆ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶ ಮತ್ತು ರಾಜ್ಯದ ಪ್ರಗತಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದರು.
Advertisement
ರಾಜ್ಯದ ಧೀಮಂತ ನಾಯಕ,ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುವ ಮಾನ್ಯ ಶ್ರೀ ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
ಓಂ ಶಾಂತಿ#SMKrishna pic.twitter.com/09NnE67FaU
— Prathap Simha (@mepratap) December 10, 2024
Advertisement
ಎಸ್.ಎಂ.ಕೃಷ್ಣ ಅವರಂಥ ಒಬ್ಬ ಒಳ್ಳೆಯ ರಾಜಕೀಯ ಮುತ್ಸದ್ಧಿ, ದಿಗ್ಗಜರನ್ನು ಕಳೆದುಕೊಂಡಿರುವುದು ನಿಜಕ್ಕೂ ದುಃಖಕರ ಸಂಗತಿ ಎಂದು ನಮನ ಸಲ್ಲಿಸಿದರು.ಇದನ್ನೂ ಓದಿ: ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ