ನವದೆಹಲಿ: 2022ರಲ್ಲಿ ಭಾರತದ ಜಿಡಿಪಿ ಶೇ.6.7ರಷ್ಟು ಪ್ರಗತಿ ಕಾಣಲಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆಯಾಗಲಿದೆ ಎಂದು ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್(ಯುಎನ್‍ಸಿಟಿಎಡಿ) ತನ್ನ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್ ರಿಪೋರ್ಟ್-2021ರಲ್ಲಿ ತಿಳಿಸಿದೆ.
Advertisement
2022ರಲ್ಲಿ ಭಾರತ ಶೇ.6.7ರಷ್ಟು ಅಂದರೆ ವಿಶ್ವದಲ್ಲೇ ಅತ್ಯಂತ ವೇಗದ ಜಿಡಿಪಿ ಬೆಳವಣಿಗೆ ಕಾಣಲಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು, ಶೇ.5.7ರಷ್ಟು ಜಿಡಿಪಿ ಕಾಣಲಿದೆ ಎಂದು ಯುಎನ್‍ಸಿಟಿಎಡಿ ತನ್ನ ವರದಿಯಲ್ಲಿ ತಿಳಿಸಿದೆ. 2021ರಲ್ಲಿ ಚೀನಾ 8.3ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಭಾರತ 2021ರಲ್ಲಿ ಶೇ.7.2ರಷ್ಟು ಬೆಳವಣಿಗೆ ಕಂಡಿತ್ತು. ಜಾಗತಿಕ ಆರ್ಥಿಕತೆಯು ಸುಮಾರು ಶೇ.5.3ರಷ್ಟು ಹೆಚ್ಚಳದೊಂದಿಗೆ ಅರ್ಧ ಶತಮಾನದಲ್ಲೇ ಅತ್ಯಂತ ವೇಗದ ಬೆಳೆವಣಿಗೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ – ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್
Advertisement
Advertisement
ಈ ವರ್ಷ ಜಾಗತಿಕ ಬೆಳವಣಿಗೆ ಶೇ.5.3ರಷ್ಟು ತಲುಪುವ ನಿರೀಕ್ಷೆ ಇದೆ. ಇದು ಸುಮಾರು ಅರ್ಧ ಶತಮಾನದಲ್ಲಿಯೇ ಅತ್ಯಂತ ವೇಗವಾದ ಬೆಳವಣಿಗೆಯಾಗಿದೆ. ಕೆಲವು ದೇಶಗಳು 2021ರ ಅಂತ್ಯದ ವೇಳೆಗೆ 2019ರ ತಮ್ಮ ಉತ್ಪಾದನಾ ಮಟ್ಟವನ್ನು ಪುನಃ ಸ್ಥಾಪಿಸಲಿವೆ, ಇಲ್ಲವೇ ಮೀರಿಸುತ್ತವೆ. 2021ರ ಹೊರತಾದ ಜಾಗತಿಕ ಚಿತ್ರಣವು ಅನಿಶ್ಚಿತತೆಯಿಂದ ಕೂಡಿದೆ ಎಂದು ಹೇಳಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ
Advertisement
ಮುಂದಿನ ವರ್ಷ ಜಾಗತಿಕ ಬೆಳವಣಿಗೆಯಲ್ಲಿ ಕುಸಿತ ಕಾಣಬಹುದು ಎಂದು ಯುಎನ್‍ಸಿಟಿಎಡಿ ಹೇಳಿದೆ. ಆದರೆ ಎಷ್ಟು ಅವಧಿಯವರೆಗೆ ಮತ್ತು ಎಷ್ಟು ಕುಸಿತವಾಗುತ್ತದೆ ಎಂಬುದು ಪ್ರಮುಖ ಆರ್ಥಿಕತೆಗಳಲ್ಲಿನ ನೀತಿ, ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದೆ.
2020ರಲ್ಲಿ ಶೇ.3.5ರಷ್ಟು ಕುಸಿತದ ನಂತರ, ಈ ವರ್ಷ ಜಾಗತಿಕ ಉತ್ಪಾದನೆಯು ಶೇ.5.3ರಷ್ಟು ಬೆಳವಣಿಗೆಯ ನಿರೀಕ್ಷೆಯಲ್ಲಿದೆ. 2020ರಲ್ಲಿ ಆದ ನಷ್ಟವನ್ನು ಭಾಗಶಃ ತುಂಬುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಇಲ್ಲದ ಸಮಯದಲ್ಲಿ ಅಂದರೆ 2017-19ರ ಅವಧಿಯಲ್ಲಿ ವಾರ್ಷಿಕ ಜಾಗತಿಕ ಬೆಳವಣಿಗೆ ದರ ಶೇ.3ರಷ್ಟಿತ್ತು ಎಂದು ಯುಎನ್‍ಸಿಟಿಎಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.