ಟೆಹ್ರಾನ್: ಒಮಾನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿನ್ ಸಾಗಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ತೈಲ ಟ್ಯಾಂಕರ್ (Fuel Tanker) ’ಜಗ್ ಪ್ರಕಾಶ್’ ಹಾರ್ಮುಜ್ ಜಲಸಂಧಿಯ (Hormuz Strait) ಪೂರ್ವದಿಂದ ಪ್ರಯಾಣ ಬೆಳೆಸಿದೆ.
ಫೆ.28 ರಂದು ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಕಾರಣವಾದ ಅಮೆರಿಕ-ಇಸ್ರೇಲಿ ದಾಳಿಗೆ ಪ್ರತೀಕಾರವಾಗಿ ಇರಾನ್ (Iran) ಈ ಪ್ರದೇಶವನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ, ಕಳೆದ ಎರಡು ವಾರಗಳಿಂದ ಗಲ್ಫ್ ಹಡಗು ಸಾಗಣೆಯಲ್ಲಿ ಅಡಚಣೆ ಉಂಟಾಗಿದೆ. ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್‌ಗಳಿಗೆ ಇಂಧನ ಪೂರೈಸುವ ವಿಮಾನ ಪತನ – ನಾಲ್ವರು ಸಾವು, ಇಬ್ಬರಿಗೆ ಗಾಯ
ಗುರುವಾರ ಓಮನ್ ಕೊಲ್ಲಿಯಲ್ಲಿ ಹಾರ್ಮುಜ್ ಜಲಸಂಧಿಯ ಪೂರ್ವದಲ್ಲಿ ನಾಲ್ಕು ಭಾರತೀಯ ಧ್ವಜ ಹೊತ್ತ ಹಡಗುಗಳು ಸಿಲುಕಿಕೊಂಡಿದ್ದವು. ಅವುಗಳಲ್ಲಿ ಒಂದು ಜಗ್ ಪ್ರಕಾಶ್ ಈಗ ಪ್ರಯಾಣ ಬೆಳೆಸಿದೆ ಎಂದು ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಪೂರ್ವ ಭಾಗದಲ್ಲಿ ಇನ್ನೂ ಮೂರು ಹಡಗುಗಳು ಸಿಲುಕಿಕೊಂಡಿವೆ. ಅವುಗಳಲ್ಲಿ 76 ಭಾರತೀಯ ನಾವಿಕರು ಇದ್ದಾರೆ. ಶುಕ್ರವಾರ ಪರ್ಷಿಯನ್ ಕೊಲ್ಲಿಯಲ್ಲಿ ಜಲಸಂಧಿಯ ಪಶ್ಚಿಮಕ್ಕೆ ಭಾರತೀಯ ಧ್ವಜ ಹೊತ್ತ 24 ಹಡಗುಗಳು ಸಿಕ್ಕಿಹಾಕಿಕೊಂಡಿವೆ. ಒಟ್ಟು 677 ಭಾರತೀಯ ನಾವಿಕರು ಹಡಗಿನಲ್ಲಿದ್ದಾರೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ.
ಮಾ.21 ರಂದು ಜಗ್ ಪ್ರಕಾಶ್ ಒಮಾನ್‌ನ ಸೋಹರ್ ಬಂದರಿನಲ್ಲಿ ಟಾಂಜಾನಿಯಾದ ಟಾಂಗಾ ಬಂದರಿನಲ್ಲಿ ಲೋಡ್ ಮಾಡಲಾದ ಇಂಧನವನ್ನು ಬಿಡುಗಡೆ ಮಾಡಲಿದೆ ಎಂದು ಕೆಪ್ಲರ್‌ನ ಹಡಗು-ಟ್ರ್ಯಾಕಿಂಗ್ ದತ್ತಾಂಶವು ತೋರಿಸಿದೆ. ಇದನ್ನೂ ಓದಿ: ಇರಾನ್ ಶೀಘ್ರವೇ ಶರಣಾಗಲಿದೆ ಎಂದ ಟ್ರಂಪ್ – ಕೊಲ್ಲಿ ಯುದ್ಧ ಅಂತ್ಯ?
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧದ ಸಮಯದಲ್ಲಿ ಜಲಮಾರ್ಗವು ಪರಿಣಾಮಕಾರಿಯಾಗಿ ಮುಚ್ಚಲ್ಪಟ್ಟಿತ್ತು. ಈಗ ಇರಾನ್ ಕೆಲವು ದೇಶಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅವಕಾಶ ನೀಡಿದೆ ಎಂದು ಅದರ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ಹೇಳಿದ್ದಾರೆ.

