ಧಾರವಾಡ: ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ನಡೆದ ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಗರಿ ಸಿಕ್ಕಿದೆ.
2021 ಆಗಸ್ಟ್ 15, ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದು ಕಲಘಟಗಿ ಪಟ್ಟಣದಲ್ಲಿ ಮಾಜಿ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ಮತಕ್ಷೇತ್ರದ, ಮಾಜಿ ಶಾಸಕರಾದ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ನಡೆಸಿದ 2 ಕಿ.ಮೀ ಉದ್ದ ಹಾಗೂ 3 ಮೀಟರ್ ಅಗಲದ ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯ ಗರಿ ಸಂದಿದೆ. ಇದನ್ನೂ ಓದಿ: ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
Advertisement
Advertisement
ತ್ರಿವರ್ಣ ಧ್ವಜದ ಜಾಥಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ರಾಷ್ಟ್ರಾಭಿಮಾನ ಮೆರೆದಿದ್ದರು. ಇಷ್ಟೊಂದು ದೊಡ್ಡ ಹಾಗೂ ಅಗಲದ ರಾಷ್ಟ್ರ ಧ್ವಜ ಅನಾವರಣ ಹಾಗೂ ರ‍್ಯಾಲಿ ಈ ವರೆಗೆ ಭಾರತದಲ್ಲಿ ಎಲ್ಲೂ ನಡೆದಿಲ್ಲ. ಇದನ್ನೂ ಓದಿ: ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!
Advertisement
Advertisement
ಜಾಥದಲ್ಲಿ ಬಳಸಿದ ತ್ರಿವರ್ಣ ಧ್ವಜದ ಒಟ್ಟು ತೂಕ 350 ಕೆ ಜಿ ಯಷ್ಟಿತ್ತು. 48 ಗಂಟೆಗಳನ್ನು ಈ ಧ್ವಜ ಸಿದ್ಧಪಡಿಸಲು ತೆಗೆದುಕೊಳ್ಳಲಾಗಿದ್ದು, 60 ಮಂದಿ ಇದರ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರಿನ ಕೆ ಆರ್ ಮಾರುಕಟ್ಟೆಯ ಕಲ್ಯಾಣ್ ಟೆಕ್ಸ್ ಟೈಲ್ಸ್‌ನಲ್ಲಿ ಈ ಬೃಹತ್ ಧ್ವಜವನ್ನು ಸಿದ್ಧಪಡಿಸಲಾಗಿತ್ತು. ಇದನ್ನೂ ಓದಿ: 2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ