ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

Public TV
1 Min Read
indian flag pakistani

ಬುಕಾರೆಸ್ಟ್‌: ಯುದ್ಧಪೀಡಿತ ಉಕ್ರೇನ್‌ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು, ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ದೇಶಗಳಿಗೆ ವಾಪಸ್‌ ಆಗಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಧ್ವಜ, ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಯುದ್ಧಪೀಡಿತ ಪ್ರದೇಶದಿಂದ ಪಾರಾಗಲು ನೆರವಾಗಿದೆ.

ಭಾರತದ ಧ್ವಜ ಕೇವಲ ಭಾರತೀಯರಿಗಷ್ಟೇ ಅಲ್ಲ, ನೆರೆಯ ರಾಷ್ಟ್ರಗಳ ಪ್ರಜೆಗಳಿಗೂ ಉಕ್ರೇನ್‌ ಗಡಿ ಭಾಗಗಳನ್ನು ಸುರಕ್ಷಿತವಾಗಿ ದಾಟಲು ಸಹಕಾರಿಯಾಗಿದೆ. ಇದನ್ನೂ ಓದಿ: 6 ದಿನದಲ್ಲಿ 6 ಸಾವಿರ ರಷ್ಯಾ ಯೋಧರ ಹತ್ಯೆ: ಉಕ್ರೇನ್ ಅಧ್ಯಕ್ಷ

Russia Ukraine War 1

ಉಕ್ರೇನ್‌ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ರಾಷ್ಟ್ರೀಯ ತ್ರಿವರ್ಣ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಕಲರ್‌ ಸ್ಪ್ರೈ ಮತ್ತು ಕರ್ಟೈನ್‌ ಖರೀದಿಸಿ ಸ್ವತಃ ತಾವೇ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ. ವಿದ್ಯಾರ್ಥಿಗಳೇ ರೂಪಿಸಿದ ತ್ರಿವರ್ಣ ಧ್ವಜ ಮಾದರಿ, ಅವರು ಗಡಿ ದಾಟಲು ಸಹಾಯವಾಗಿದೆ. ಈ ಕುರಿತು ಅನುಭವವನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

ukraine indians

ತ್ರಿವರ್ಣ ಧ್ವಜ ಹಿಡಿದುಕೊಂಡು ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಸಹ ಚೆಕ್‌ಪೋಸ್ಟ್‌ಗಳನ್ನು ದಾಟಿದ್ದಾರೆ ಎಂದು ಭಾರತದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.

ಮೊಲ್ಡೊವಾದಲ್ಲಿ ನಮಗೆ ಯಾವುದೇ ತೊಂದರೆ ಆಗಲಿಲ್ಲ. ಭಾರತೀಯ ರಾಯಭಾರಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ವಿಶೇಷ ವಿಮಾನ ಬರುವವರೆಗೂ ಸೂಕ್ತ ವಸತಿ ವ್ಯವಸ್ಥೆ ಮತ್ತು ಆಹಾರ ಸೌಲಭ್ಯ ಕಲ್ಪಿಸಿದ್ದ ರಾಯಭಾರಿ ಕಚೇರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

Share This Article
Leave a Comment

Leave a Reply

Your email address will not be published. Required fields are marked *