ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಮೊದಲೇ ಹೇಳಿದ್ದೆ. ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ತಮಿಳು ನಟ ವಿಶಾಲ್ ಹೇಳಿದರು.
Advertisement
ನಗರದಲ್ಲಿ ಮಂಗಳವಾರ ನಡೆದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ನಮ್ಮನ್ನು ಆಗಲಿದ್ದು ಬೇಸರ ತರಿಸಿದೆ. ಪುನೀತ್ ನನ್ನ ಮಿತ್ರ, ಅವರು ಒಳ್ಳೆ ಮನುಷ್ಯ. ನನಗೆ ಪುನೀತ್ ದೊಡ್ಡ ಅಣ್ಣನಂತೆ. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ
Advertisement
ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ. ಅವರ ಮಾನವೀಯ ಗುಣ, ಕೆಲಸ ಎಲ್ಲರೂ ಮೆಚ್ವುವಂತದ್ದು. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅವರ ಕೆಲಸಗಳನ್ನು ಭಾರತೀಯ ಚಿತ್ರರಂಗ ಸಾವಿರ ವರ್ಷ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: 6 ಕೋಟಿ ಜನರ ಪರವಾಗಿ ಅಪ್ಪುಗೆ ಆ ಮುತ್ತು ಕೊಟ್ಟೆ: ಸಿಎಂ
Advertisement
Advertisement
ಪುನೀತ್ ಅವರು ಓದಿಸುತ್ತಿದ್ದ ಮಕ್ಕಳ ಜವಬ್ದಾರಿ ಇದೆ. ನಾನು ಈಗಾಗಲೇ ಅವರು ಜವಬ್ದಾರಿ ವಹಿಸಿದ್ದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡಿರುವ ಬಗ್ಗೆ ಹೇಳಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.