ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದ (Global Hunger Index) 2022ರ ಪಟ್ಟಿಯಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 101ನೇ ಸ್ಥಾನದಲ್ಲಿದ್ದ ಭಾರತ (India) ಈ ವರ್ಷ 107ನೇ ಸ್ಥಾನಕ್ಕೆ ಕುಸಿದಿದೆ. ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್ ಜಂಟಿಯಾಗಿ ಅಧ್ಯಕ್ಷ ನಡೆಸಿದ ಅಧ್ಯಯನದಲ್ಲಿ ಭಾರತದ ಹಸಿವಿನ ಪರಿಸ್ಥಿತಿ ‘ಗಂಭೀರ’ವಾಗಿದೆ ಎಂದು ಹೇಳಿದೆ.
121 ದೇಶಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಭಾರತದ ನೆರೆಯ ದೇಶಗಳಾದ ನೇಪಾಳ (81), ಪಾಕಿಸ್ತಾನ (99), ಶ್ರೀಲಂಕಾ (64) ಮತ್ತು ಬಾಂಗ್ಲಾದೇಶ (84) ಸ್ಥಾನದಲ್ಲಿದೆ. ಭಾರತಕ್ಕೆ 29.1 ಅಂಕವನ್ನು ನೀಡಲಾಗಿದ್ದು, ಇದು ಹಸಿವಿನ ಮಟ್ಟದ ‘ಗಂಭೀರ’ ವಿಭಾಗಕ್ಕೆ ಸೇರಿದೆ. ಚೀನಾ, ಟರ್ಕಿ, ಕುವೈತ್ ಸೇರಿದಂತೆ ಹದಿನೇಳು ದೇಶಗಳು GHI ಸ್ಕೋರ್‌ನಲ್ಲಿ ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಕೊಳೆತ ಶವ ಪತ್ತೆ
Advertisement
Advertisement
Global Hunger Index ಸ್ಕೋರ್ ಅನ್ನು ನಾಲ್ಕು ಸೂಚಕಗಳ ಮೇಲೆ ಅಳೆಯಲಾಗುತ್ತದೆ. ಮೊದಲನೆಯದಾಗಿ ಅಪೌಷ್ಟಿಕತೆ, ಇದು ಮಗುವಿನ ಕ್ಷೀಣತೆ (ತಮ್ಮ ಎತ್ತರಕ್ಕೆ ಕಡಿಮೆ ತೂಕ ಹೊಂದಿರುವ ಐದು ವರ್ಷದೊಳಗಿನ ಮಕ್ಕಳ ಪಾಲು, ತೀವ್ರ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ) ಎರಡನೇಯದಾಗಿ ಮಕ್ಕಳ ಬೆಳವಣಿಗೆ ಕುಂಠಿತ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಅಗತ್ಯಕ್ಕಿಂತ ಕಡಿಮೆ ಎತ್ತರವನ್ನು ಹೊಂದಿರುವ, ದೀರ್ಘಕಾಲದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ). ಮೂರನೇ ಅಂಶ ಮಕ್ಕಳ ಮರಣ (ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ) ಪರಿಗಣಿಸಲಾಗುತ್ತದೆ. ಈ ವಿಧಾನದ ಪ್ರಕಾರ, 9.9 ಕ್ಕಿಂತ ಕಡಿಮೆ ಅಂಕವನ್ನು ‘ಕಡಿಮೆ’ ಎಂದು ಪರಿಗಣಿಸಲಾಗುತ್ತದೆ, 10-19.9 ‘ಮಧ್ಯಮ’, 20-34.9 ‘ಗಂಭೀರ’, 35-49.9 ‘ಆತಂಕಕಾರಿ’ ಮತ್ತು 50 ಕ್ಕಿಂತ ಹೆಚ್ಚು ‘ಅತ್ಯಂತ ಆತಂಕಕಾರಿ’ ಎಂದು ಪರಿಗಣಿಸಲಾಗುತ್ತದೆ.
Advertisement
ಭಾರತವು ಇತ್ತೀಚಿನ ವರ್ಷಗಳಲ್ಲಿ GHI ಸ್ಕೋರ್‌ಗಳನ್ನು ಕಡಿಮೆ ಮಾಡುತ್ತಾ ಬರುತ್ತಿದೆ. 2000 ಇಸವಿಯಲ್ಲಿ, ಇದು 38.8 ರ ‘ಆತಂಕಕಾರಿ’ ಸ್ಕೋರ್ ಅನ್ನು ದಾಖಲಿಸಿತು. 2014 ರ ವೇಳೆಗೆ 28.2 ಕ್ಕೆ ( ಗಂಭೀರ) ಇಳಿಕೆಯಾಗಿದೆ. ಅಂದಿನಿಂದ ದೇಶವು ಹೆಚ್ಚಿನ ಅಂಕಗಳನ್ನು ದಾಖಲಿಸಲು ಪ್ರಾರಂಭಿಸಿದೆ. ಇದನ್ನೂ ಓದಿ: ಆರ್‌ಸಿಬಿಯನ್ನು ಗೇಲಿ ಮಾಡಿದ್ದಕ್ಕೆ ಸ್ನೇಹಿತನನ್ನೇ ಹತ್ಯೆಗೈದ
Advertisement
ಭಾರತವು ನಾಲ್ಕು ಸೂಚಕಗಳಿಗೆ ಸ್ಥಿರವಾಗಿ ಕಡಿಮೆ ಮೌಲ್ಯಗಳನ್ನು ದಾಖಲಿಸುತ್ತಿದೆ. 2014 ರಿಂದ ಅಪೌಷ್ಟಿಕತೆ ಮತ್ತು ಮಕ್ಕಳಲ್ಲಿ ಕ್ಷೀಣಿಸುವಿಕೆಯಲ್ಲಿ ಏರುಗತಿ ಪ್ರಾರಂಭಿಸಿತು. ಜನಸಂಖ್ಯೆಯಲ್ಲಿನ ಅಪೌಷ್ಟಿಕತೆಯ ಪ್ರಮಾಣವು 2014 ರಲ್ಲಿ ಶೇ.14.8 ರಿಂದ 2022 ರಲ್ಲಿ ಶೇ.16.3 ಕ್ಕೆ ಏರಿತು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಕ್ಷೀಣಿಸುವಿಕೆಯ ಪ್ರಮಾಣವು 2014 ರಲ್ಲಿ ಶೇ.15.1 ರಿಂದ 2022 ರಲ್ಲಿ ಶೇ.19.3 ಕ್ಕೆ ಏರಿತು.
ಭಾರತವು ಇತರ ಎರಡು ಸೂಚಕಗಳಲ್ಲಿ ಸುಧಾರಣೆಯನ್ನು ಕಂಡಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಉತ್ತಮ ಬೆಳವಣಿಗೆ 2014 ರಲ್ಲಿ ಶೇ.38.7 ರಿಂದ 2022 ರಲ್ಲಿ ಶೇ.35.5 ಕ್ಕೆ ಮತ್ತು ಐದು ವರ್ಷದೊಳಗಿನ ಮರಣವು 2014 ರಲ್ಲಿ ಶೇ.4.6 ರಿಂದ 2022 ರಲ್ಲಿ ಶೇ.3.3 ಕ್ಕೆ ಕಡಿಮೆಯಾಗಿದೆ.