ಎಜ್ಬಾಸ್ಟನ್: ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ಆಕಾಶ್ ದೀಪ್ (Akash Deep) ಅವರ ಉತ್ತಮ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರವ ಎರಡನೇ ಟೆಸ್ಟ್ ಪಂದ್ಯಲ್ಲಿ ಭಾರತ (Team India) 244 ರನ್‌ಗಳ ಮುನ್ನಡೆಯಲ್ಲಿದೆ.
ಎರಡನೇ ದಿನ 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು 89.3 ಓವರ್‌ಗಳಲ್ಲಿ 407 ರನ್ ಗಳಿಸಿ ಆಲೌಟ್ ಆಯ್ತು. ಹ್ಯಾರಿ ಬ್ರೂಕ್ ಮತ್ತು ಜೇಮಿ ಸ್ಮಿತ್ ಅವರು 6ನೇ ವಿಕೆಟಿಗೆ 368 ಎಸೆತಗಳಲ್ಲಿ 303 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 400 ರನ್‌ಗಳ ಗಡಿ ದಾಟಿತು.
A ⭐⭐⭐⭐⭐ performance! #MohammedSiraj steps up in the absence of #JaspritBumrah and delivers a memorable bowling performance at Edgbaston! 🔥#ENGvIND 👉 2nd TEST, Day 3 | LIVE NOW on JioHotstar ➡ https://t.co/zKFoXmGVoj pic.twitter.com/8C6jkd1FuK
— Star Sports (@StarSportsIndia) July 4, 2025
ಹ್ಯಾರಿ ಬ್ರೂಕ್ 158 ರನ್ (234 ಎಸೆತ, 17 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ ಜೇಮಿ ಸ್ಮಿತ್ ಔಟಾಗದೇ 184 ರನ್ (207 ಎಸೆತ, 21 ಬೌಂಡರಿ, 4 ಸಿಕ್ಸ್) ಹೊಡೆದರು. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್
387 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 20 ರನ್‌ಗಳಿಸುವಷ್ಟರಲ್ಲೇ 5 ವಿಕೆಟ್ ಪತನಗೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತು. ಸಿರಾಜ್ 70 ರನ್ ನೀಡಿ 6 ವಿಕೆಟ್ ಪಡೆದರೆ ಆಕಾಶ್ ದೀಪ್ 4 ವಿಕೆಟ್ ಪಡೆದು ಇಂಗ್ಲೆಂಡ್ ರನ್‌ಗೆ ನಿಯಂತ್ರಣ ಹೇರಿದರು.
An absolute jaffa! 🙌#AkashDeep gets the much-needed breakthrough for #TeamIndia with a peach of a delivery! 🏏⚡#ENGvIND 👉 2nd TEST, Day 3 | LIVE NOW on JioHotstar ➡ https://t.co/zKFoXmGVoj pic.twitter.com/Tkvn2Dd2rd
— Star Sports (@StarSportsIndia) July 4, 2025
ನಂತರ ಬ್ಯಾಟಿಂಗ್ ಮಾಡಿದ ಭಾರತ 1 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 28 ರನ್ ಹೊಡೆದು ಔಟಾದರೆ ಕೆಎಲ್ ರಾಹುಲ್ (KL Rahul) ಔಟಾಗದೇ 28 ರನ್, ಕರುಣ್ ನಾಯರ್ ಔಟಾಗದೇ 7 ರನ್ ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.