ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ (ODI) ಬಿಸಿಸಿಐ (BCCI) ಆಟಗಾರ್ತಿಯರ ತಂಡವನ್ನು ಪ್ರಕಟಿಸಿದ್ದು, ಶಫಾಲಿ ವರ್ಮಾ (Shafali Verma) ಹಾಗೂ ಶ್ರೇಯಾಂಕಾ ಪಾಟೀಲ್‌ನ್ನು (Shreyanka Patil) ಕೈಬಿಟ್ಟಿದೆ.
ಡಿ.5 ರಿಂದ 11 ರವರೆಗೆ ನಡೆಯಲಿರುವ ಭಾರತ (India) ಹಾಗೂ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐ ಮಂಗಳವಾರ (ನ.19) ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ.
Advertisement
ಡಿ.5 ಹಾಗೂ ಡಿ.8 ರಂದು ಮೊದಲ ಎರಡು ಪಂದ್ಯಗಳು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ಹಾಗೂ ಡಿ.11 ರಂದು ಫೈನಲ್ ಪಂದ್ಯ ವೆಸ್ಟರ್ನ್ ಆಸ್ಟ್ರೇಲಿಯನ್ ಕ್ರಿಕೆಟ್ ಅಸೋಸಿಯನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ
Advertisement
Advertisement
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಎಕ್ಸ್ ಖಾತೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ 15 ಸ್ಪರ್ಧಿಗಳನ್ನು ಪ್ರಕಟಿಸಿದೆ. ಸ್ಪರ್ಧಿಗಳ ಪಟ್ಟಿಯಲ್ಲಿ ಭಾರತ ಮಹಿಳಾ ತಂಡದ ಓಪನಿಂಗ್ ಬ್ಯಾಟರ್ ಶಫಾಲಿ ವರ್ಮಾ ಹಾಗೂ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಅವರನ್ನು ಕೈಬಿಟ್ಟಿದೆ.
Advertisement
ಇನ್ನೂ ಕಳೆದ ತಿಂಗಳು ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಗೆಲುವನ್ನು ಸಾಧಿಸಿತ್ತು. ಈ ಗೆಲುವಿನ ಭಾಗವಾಗಿದ್ದ ಐವರು ಆಟಗಾರರನ್ನು ಮುಂಬರುವ ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಮಾಡಿಲ್ಲ. ಆದರೆ ಹರ್ಲೀನ್ ಡಿಯೋಲ್, ಪ್ರಿಯಾ ಪುನಿಯಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ತಂಡದಲ್ಲಿದ್ದಾರೆ.
🚨 NEWS 🚨
Team India (Senior Women) squad for Tour of Australia announced.
Details 🔽 #TeamIndia | #AUSvINDhttps://t.co/lzhKMmcWr4
— BCCI Women (@BCCIWomen) November 19, 2024
ನ್ಯೂಜಿಲೆಂಡ್ ಸರಣಿಯ ವೇಳೆ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಬೇಕಾಗಿದ್ದರಿಂದ ರೀಚಾ ಘೋಷ್ ಆ ಪಂದ್ಯದಲ್ಲಿರಲಿಲ್ಲ. ಇಲ್ಲಿಯವರೆಗೆ ಶಫಾಲಿ ವರ್ಮಾ ಆಡಿದ 29 ಏಕದಿನ ಸರಣಿಯಲ್ಲಿ ಒಟ್ಟು 644 ರನ್ ಗಳಿಸಿದ್ದಾರೆ. ಇನ್ನೂ ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ 33, 11 ಮತ್ತು 12 ರನ್ ಗಳಿಸಿದ್ದರು.
ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ (ವಿಕೇಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ , ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.9 ರಿಂದ ಚಳಿಗಾಲದ ಅಧಿವೇಶನ