ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

Public TV
1 Min Read
Olive Ridley

ಭುವನೇಶ್ವರ: ಅಳಿವಿನಂಚಿನಲ್ಲಿರುವ ಆಲೀವ್ ರಿಡ್ಲಿ (Olive Ridley) ಕಡಲಾಮೆಗಳ (Sea Turtles) ಸಂರಕ್ಷಣೆಗಾಗಿ ಒಡಿಶಾದ ವೀಲರ್ ದ್ವೀಪದಲ್ಲಿ (Wheeler Island ) ಜನವರಿಯಿಂದ ಮಾರ್ಚ್‌ವರೆಗೆ ಕ್ಷಿಪಣಿ ಪರೀಕ್ಷೆ ನಡೆಸದಿರಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಿರ್ಧರಿಸಿದೆ.

ಈ ಅವಧಿಯಲ್ಲಿ ಕಡಲಾಮೆಗಳು ಸಮುದ್ರ ಸಮೀಪದ ಭೂಪ್ರದೇಶಕ್ಕೆ ಬಂದು ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಕ್ಷಿಪಣಿ ಪರೀಕ್ಷೆಯಿಂದ ಉಂಟಾಗುವ ಭಾರಿ ಶಬ್ದ ಮತ್ತು ಬೆಳಕು ಈ ಆಮೆಗಳಿಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

India Successfully Conducts Night Trials Of Nuclear Capable Agni V Ballistic Missile 3

ಆಹಾರಕ್ಕಾಗಿ ಈ ಆಮೆಗಳನ್ನು ಬೇಟೆಯಾಡುವವರು ಮತ್ತು ಮೊಟ್ಟೆಗಳನ್ನು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ತಳಿಯ ಆಮೆಗಳು ಅಳಿವಿನಂಚಿಗೆ ತಲುಪಿದೆ.

ಯಾಂತ್ರೀಕೃತ ದೋಣಿಗಳು, ಕ್ಷಿಪಣಿ ಪರೀಕ್ಷೆ ಮತ್ತು ಜನರ ಚಲನೆಯು ಸಮುದ್ರ ಆಮೆಗಳ ಸಾಮೂಹಿಕ ಗೂಡುಕಟ್ಟುವ ಮತ್ತು ದ್ವೀಪದ ಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.   ಇದನ್ನೂ ಓದಿ: ನಾನು 40 ವರ್ಷಗಳ ಕಾಲ ವಾರಕ್ಕೆ 85-90 ಗಂಟೆ ಕೆಲಸ ಮಾಡಿದ್ದೆ, ನನ್ನ ಶ್ರಮ ವ್ಯರ್ಥವಾಗಲಿಲ್ಲ: ನಾರಾಯಣ ಮೂರ್ತಿ

ಮೀನುಗಾರಿಕಾ ದೋಣಿಗಳು ಆಮೆಗಳು ಮೊಟ್ಟೆಗಳನ್ನು ಇಟ್ಟಿರುವ ಜಾಗಗಳು ಇರುವ ಮರಳಿನ ಪಟ್ಟಿಗಳ ಹತ್ತಿರ ಹೋಗದಂತೆ ಸೇನೆ ಮತ್ತು ಕೋಸ್ಟ್ ಗಾರ್ಡ್‌ ಗಸ್ತು ಕಾಯುತ್ತಿವೆ.

ಸುಮಾರು 6.6 ಲಕ್ಷ ಸಮುದ್ರ ಆಮೆಗಳು ಗಂಜಾಂ ಜಿಲ್ಲೆಯಲ್ಲಿರುವ ರುಶಿಕುಲ್ಯ ರೂಕೆರಿಯಲ್ಲಿ ಗೂಡುಕಟ್ಟಿವೆ. ಒಡಿಶಾ ಸರ್ಕಾರ (Odisha Government ) ಈಗಾಗಲೇ ನವೆಂಬರ್ 1 ರಿಂದ ಮೇ 31 ರವರೆಗೆ ಈ ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿದೆ.

 

Share This Article