ಕೊಲಂಬೊ: ಏಕದಿನ ಏಷ್ಯಾಕಪ್ (Asia Cup 2023) ಮತ್ತು ವಿಶ್ವಕಪ್‌ನಂತಹ (WorldCup 2023) ಪ್ರತಿಷ್ಠಿತ ಟೂರ್ನಿಗಳಲ್ಲಿ ʻಟ್ರಂಪ್ ಕಾರ್ಡ್ʼ (ಮುಖ್ಯ ಪ್ಲೇಯರ್ಸ್) ಎಂದು ಪರಿಗಣಿಸಲಾದ ಅನೇಕ ಯುವ ಆಟಗಾರರು ಇರೋದ್ರಿಂದ ಭಾರತ ತಂಡವು ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರ ಮೇಲೆ ಅವಲಂಬಿತವಾಗಿಲ್ಲ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಮಿಂದಾ ವಾಸ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದ (SriLanka) ವಿವಿಧ ಕ್ರೀಡಾಂಗಣಗಳಲ್ಲಿ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿರುವುದರಿಂದ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿದ ಚಮಿಂದಾ ವಾಸ್ ಹೀಗೆ ಹೇಳಿದ್ದಾರೆ.
Advertisement
Advertisement
ಟೀಂ ಇಂಡಿಯಾಕ್ಕೆ (Team India) ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಾತ್ರ ಮುಖ್ಯ ಪ್ಲೇಯರ್‌ಗಳಲ್ಲ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಅವರಂತಹ ಅನೇಕ ಕ್ರಿಕೆಟಿಗರು ಟ್ರಂಪ್ ಕಾರ್ಡ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಹೀಗೆ ಇನ್ನೂ ಅನೇಕ ಪ್ರತಿಭೆಗಳಿವೆ. ಆದ್ದರಿಂದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರ ಮೇಲೆಯೇ ಸಾರ್ವಕಾಲಿಕವಾಗಿ ಅವಲಂಭಿತವಾಗಿಲ್ಲ. ಒಂದು ವೇಳೆ ಅವರು ಉತ್ತಮ ಪ್ರದರ್ಶನ ನೀಡಿದರೆ ಭಾರತ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
Advertisement
ಬುಮ್ರಾ ಬಂದ್ರೆ ಲಾಭ:
ಇದೇ ವೇಳೆ ಜಸ್ಪ್ರೀತ್ ಬುಮ್ರಾ (Jasprit Bumrah) ಕಂಬ್ಯಾಕ್ ಕುರಿತು ಮಾತನಾಡಿದ ಚಮಿಂದಾ ವಾಸ್, ಬುಮ್ರಾ ಟೀಂ ಇಂಡಿಯಾಕ್ಕೆ ಮರಳಿದರೆ ಇನ್ನಷ್ಟು ಲಾಭವಾಗಲಿದೆ. ಏಕೆಂದರೆ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಟೀಂ ಇಂಡಿಯಾ ನಿಜಕ್ಕೂ ಅವರ ಸೇವೆಯನ್ನ ಎದುರುನೋಡುತ್ತಿದೆ. ಈಗಾಗಲೇ ಅವರು ಫಿಟ್ ಆಗಿದ್ದಾರೆ ಅಂತಾ ಹೇಳಲಾಗುತ್ತಿದೆ. ವಿಶ್ವಕಪ್ ವೇಳೆಗೆ ಮರಳಿದರೆ ಟೀಂ ಇಂಡಿಯಾಕ್ಕೆ ಅದಕ್ಕಿಂತ ದೊಡ್ಡ ಲಾಭ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು.. ಕಳೆದ ಬಾರಿ ಟಿ20 ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಂತೆ, ಏಕದಿನ ಏಷ್ಯಾಕಪ್ ಟೂರ್ನಿಯಲ್ಲೂ ಚಾಂಪಿಯನ್‌ಪಟ್ಟ ಗಿಟ್ಟಿಸಿಕೊಳ್ಳಲು ತಂಡ ಎದುರು ನೋಡುತ್ತಿದೆ. ಆದ್ರೆ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳೆಲ್ಲವೂ ಉತ್ತಮವಾಗಿರೋದ್ರಿಂದ ಮುಂದೆ ಕಾದು ನೋಡಬೇಕು ಅಂತಾ ಹೇಳಿದ್ದಾರೆ.
Web Stories