ಶ್ರೀನಗರ: ಶತ್ರುದೇಶಗಳಾದ ಪಾಕಿಸ್ತಾನ (Pakistan) ಮತ್ತು ಚೀನಾ (China) ಬೆದರಿಕೆಗಳನ್ನು ಎದುರಿಸುವ ಸಲುವಾಗಿ ಭಾರತ ಆಗಸ್ಟ್ 12ರ ಶನಿವಾರದಂದು ಶ್ರೀನಗರದಲ್ಲಿ (Srinagar) ಮೇಲ್ದರ್ಜೆಗೆರಿಸಿದ MiG -29 ಯುದ್ಧವಿಮಾನಗಳನ್ನು (Fighter Jet) ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಟ್ರೈಡೆಂಟ್ಸ್ ಸ್ಕ್ವಾಡ್ರನ್ (Tridents Squadron) ಅನ್ನು ಉತ್ತರದ ರಕ್ಷಕ ಎಂದು ಕರೆಯುತ್ತಿದ್ದು, ಶ್ರೀನಗರದ ವಾಯುನೆಲೆಯಲ್ಲಿ MiG -21 ಸ್ಕ್ವಾಡ್ರನ್‌ಗಳ ಬದಲಾಗಿ MiG -29 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಗಡಿ ರಾಷ್ಟ್ರಗಳಿಂದ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಫೈಟರ್ ಜೆಟ್‌ಗಳು ಒಳಗೊಂಡಿವೆ. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ
Advertisement
Advertisement
2020ರ ಗಲ್ವಾನ್ ಘರ್ಷಣೆಯ ಮೊದಲ ಬಾರಿಗೆ MiG -29ರ ಮೊದಲನೇ ವಿಮಾನವನ್ನು ಲಡಾಖ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿತ್ತು. ಇದು ಚೀನಾದ ಯಾವುದೇ ಬೆದರಿಕೆಯನ್ನು ವಿಫಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ
Advertisement
ಭಾರತೀಯ ವಾಯುಪಡೆಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ (Vipul Sharma) ಈ ಕುರಿತು ಮಾಹಿತಿ ನೀಡಿದ್ದು, ಶ್ರೀನಗರ ಕಾಶ್ಮೀರ ಕಣಿವೆ ಮಧ್ಯ ಭಾಗದಲ್ಲಿದೆ ಮತ್ತು ಅದರ ಎತ್ತರವು ಬಯಲು ಪ್ರದೇಶಕ್ಕಿಂತ ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಿದ್ದು, MiG -29 ಇದನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ್ರೋಹ ಕಾನೂನು ರದ್ದು: ಅಮಿತ್ ಶಾ ಮಸೂದೆ ಮಂಡನೆ
Advertisement
ಮತ್ತೊಬ್ಬ ಲೀಡರ್ ಶಿವಂ ರಾಣಾ ಈ ಬಗ್ಗೆ ಮಾತನಾಡಿದ್ದಾರೆ. ಮೇಲ್ದರ್ಜೆಗೆ ಏರಿಸಿದ ಯುದ್ಧವಿಮಾನಗಳು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನದ ಅತಿದೊಡ್ಡ ಸಾಮರ್ಥ್ಯವೆಂದರೆ ಅದು ಭಾರತೀಯ ವಾಯುಪಡೆಯಿಂದ ಆರಿಸಲ್ಪಟ್ಟ ಪೈಲೆಟ್‌ಗಳು ಇದರಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಶತ್ರು ವಿಮಾನವನ್ನು ಜ್ಯಾಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್ ಶಾ
Web Stories