ಬರ್ಮಿಂಗ್‍ಹ್ಯಾಮ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ 28 ರನ್ ಗೆಲುವು ಪಡೆದ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ.
ಟೀಂ ಇಂಡಿಯಾ ನೀಡಿದ್ದ 315ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ 48 ಓವರ್ ಗಳಲ್ಲಿ 286 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಭಾರತ ಗುರಿಯನ್ನ ಬೆನ್ನಟ್ಟಿದ್ದ ಬಾಂಗ್ಲಾದೇಶದ ಆಟಗಾರರು ಸುಲಭವಾಗಿ ಪಂದ್ಯವನ್ನು ಬಿಟ್ಟು ಕೊಡಲಿಲ್ಲ. ಭಾರತ ಬೌಲರ್ ಗಳನ್ನು ಕಾಡಿದ ಶಕಿಬ್ ಅಲ್ ಹಸನ್ 74 ಎಸೆತಗಳಲ್ಲಿ 66 ರನ್ ಗಳಿಸಿದರೆ, ಸರ್ಕಾರ್ 33 ರನ್, ಸಬ್ಬೀರ್ ರಹಮಾನ್ 36 ರನ್ ಗಳಿಸಿದರೆ, ಸೈಫುದ್ದೀನ್ ಅಜೇಯ 51 ಗಳಿಸಿದರು.
Advertisement
Advertisement
ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಶಕಿಬ್ 46ನೇ ಅರ್ಧ ಶತಕ ಸಿಡಿದರು. ಇತ್ತ ತಂಡಕ್ಕೆ ಆಪಾಯವಾಗಿ ಪರಿಣಾಮಿಸುತ್ತಿದ್ದ ಶಕಿಬ್ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಪಂದ್ಯಕ್ಕೆ ಟರ್ನ್ ನೀಡಿದರು. ಅಲ್ಲದೇ ಇದಕ್ಕೂ ಮುನ್ನ 33 ರನ್ ಗಳಿಸಿದ್ದ ಸೌಮ್ಯ ಸರ್ಕಾರ್ ಹಾಗೂ 22 ರನ್ ಗಳಿಸಿದ್ದ ಲಿಟನ್ ದಾಸ್ 22 ವಿಕೆಟ್ ಪಡೆದು ಬಾಂಗ್ಲಾ ಪತನಕ್ಕೆ ಕಾರಣರಾದರು.
Advertisement
Advertisement
40 ಓವರ್ ಗಳ ಅಂತ್ಯಕ್ಕೆ ಬಾಂಗ್ಲಾ ಪಡೆ 6 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿತ್ತು. ಈ ಹಂತದಲ್ಲಿ ಬಾಂಗ್ಲಾ ಪಡೆಗೆ ಗೆಲ್ಲಲು 90 ರನ್ ಗಳ ಅಗತ್ಯವಿತ್ತು. ಟೀಂ ಇಂಡಿಯಾ ಬೌಲರ್‍ಗಳು ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು ಕೂಡ ಅಂತಿಮ ಹಂತದಲ್ಲಿ ಕಾಡಿದ ಶಬ್ಬೀರ್ ರಹಮಾನ್ ಹಾಗೂ ಮೊಹಮ್ಮದ್ ಸೈಫುದ್ದೀನ್ ಭಾರತಕ್ಕೆ ಮುಳುಗುವ ಹಂತಕ್ಕೆ ತಲುಪಿದರು. ಆದರೆ ಈ ಹಂತದಲ್ಲಿ ದಾಳಿಗಳಿದ ಬುಮ್ರಾ 36 ರನ್ ಗಳಿಸಿದ್ದ ಶಬ್ಬೀರ್ ವಿಕೆಟ್ ಪಡೆದರು. ಈ ಜೋಡಿ 7ನೇ ವಿಕೆಟ್‍ಗೆ 66 ರನ್ ಜೊತೆಯಾಟ ನೀಡಿತ್ತು. ಆ ಬಳಿಕ ಬಂದ ಮೊರ್ತಜಾ 8 ರನ್ ಗಳಿಸಿ ಭುವಿಗೆ ವಿಕೆಟ್ ಒಪ್ಪಿಸಿದರು. ಹಂತಿಮ ಹಂತದಲ್ಲಿ ಬುಮ್ರಾ ಮತ್ತೆ ಮಿಂಚಿನ ದಾಳಿ ನಡೆಸಿದ ಪರಿಣಾಮ ಬಾಂಗ್ಲಾ ಆಲೌಟ್ ಆಯ್ತು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ, ಬುಮ್ರಾ ತಲಾ 3 ವಿಕೆಟ್ ಪಡೆದರೆ, ಶಮಿ, ಚಹಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡದರು.
Pandya has his third and it's the biggest wicket of them all: Shakib Al Hasan.
The all-rounder lobs the ball safely into the hands of Dinesh Karthik to end his stay at the crease. #BANvIND | #CWC19 pic.twitter.com/Xaw5hVVHag
— ICC Cricket World Cup (@cricketworldcup) July 2, 2019
ಟಾಸ್ ಗೆದ್ದ ನಾಯಕ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾದ ರೋಹಿತ್, ರಾಹುಲ್ ಜೋಡಿ ಮೊದಲ 5 ಓವರ್ ಗಳಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ರೋಹಿತ್ 9 ರನ್ ಗಳಿಸಿದ್ದ ವೇಳೆ ಬಾಂಗ್ಲಾದ ತಮಿಮ್ ಇಕ್ಬಾಲ್ ರೋಹಿತ್‍ರ ಸುಲಭ ಕ್ಯಾಚ್ ಕೈಚೆಲ್ಲಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಂತೆ ಸಿಕ್ಕ ಅವಕಾಶ ಬಳಸಿಕೊಂಡ ರೋಹಿತ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ರೋಹಿತ್ 45 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ರಾಹುಲ್ 57 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದರು. ಇಬ್ಬರ ಜೋಡಿ ಮೊದಲ ವಿಕೆಟ್‍ಗೆ 180 ರನ್ ಜೊತೆಯಾಟ ನೀಡಿತು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 92 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ನೆರವಿನೊಂದಿಗೆ 77 ರನ್ ಸಿಡಿಸಿದರು.
It's all going India's way now.
Make sure to follow #BANvIND on the #CWC19 app ????
APPLE ???? https://t.co/whJQyCahHr
ANDROID ???? https://t.co/Lsp1fBwBKR pic.twitter.com/VJsRHij8SZ
— ICC Cricket World Cup (@cricketworldcup) July 2, 2019
ಸಚಿನ್ ಹಾದಿಯಲ್ಲಿ ರೋ’ಹಿಟ್’: 95 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 104 ರನ್ ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ 26 ಶತಕಗಳನ್ನು ಪೂರ್ಣಗೊಳಿಸಿದ ರೋಹಿತ್, ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ ಭಾರತ ಆಟಗಾರ ಎನಿಸಿಕೊಂಡರು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈ ಬಾರಿಯ ಟೂರ್ನಿಯಲ್ಲಿ 544 ರನ್ ಗಳಿಸಿರುವ ರೋಹಿತ್ ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿದ್ದು, 516 ರನ್ ಗಳಿಸಿರುವ ಆಸೀಸ್ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. 2003 ರಲ್ಲಿ 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಸಚಿನ್ ಅವರನ್ನು ಹಿಂದಿಕ್ಕಲು ರೋಹಿತ್‍ಗೆ ಕೇವಲ 129 ರನ್ ಅಗತ್ಯವಿದೆ. ವಿಶ್ವಕಪ್ ಟೂರ್ನಿಯಲ್ಲಿ ವೇಗವಾಗಿ ಅಂದರೆ 15 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
Heartbreak for Bangladesh, joy for India – the two-time champions win by 28 runs to book their place in the semi-finals!#TeamIndia | #BANvIND | #CWC19 pic.twitter.com/PgMjIWSGJa
— ICC Cricket World Cup (@cricketworldcup) July 2, 2019
ರಹಮಾನ್ ಮಿಂಚು: ಮಧ್ಯಮ ಕ್ರಮಾಂಕದ ಪ್ರಮುಖ ವಿಕೆಟ್‍ಗಳನ್ನು ಪಡೆದು ಭಾರತ ರನ್ ವೇಗಕ್ಕೆ ಕಡಿವಾಣ ಹಾಕಿದ ಮುಸ್ತಾಫಿರ್ ರೆಹಮಾನ್ ಅಂತಿಮ ಹಂತದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ ರಹಮಾನ್ ಟೀಂ ಇಂಡಿಯಾ ಬೃಹತ್ ರನ್ ಗುರಿಗೆ ತಡೆ ಒಡ್ಡಿದರು. ಉಳಿದಂತೆ ಶಕಿಬ್ ಅಲ್ ಹಸನ್, ರುಬೆಲ್, ಸರ್ಕರ್ ತಲಾ 1 ವಿಕೆಟ್ ಪಡೆದರು.