ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಗೆಲುವು ಪಡೆದಿದ್ದು, ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.
ಧೋನಿ, ಜಾಧವ್‍ರ ಉಪಯುಕ್ತ ಶತಕದ ಜೊತೆಯಾಟದ ಪರಿಣಾಮ ಟೀಂ ಇಂಡಿಯಾ 10 ಎಸೆತ ಬಾಕಿ ಇರುವಂತೆ ಗೆಲುವಿನ ಗುರಿ ತುಲುಪಿದ್ದು, 48.2 ಓವರ್ ಗಳಲ್ಲಿ 240 ರನ್ ಗಳಿಸಿತು. ಅಲ್ಲದೇ ಹೈದರಾಬಾದ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು ಪಡೆಯಿತು. ಈ ಹಿಂದೆ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.
Advertisement
100-run partnership between @JadhavKedar & @msdhoni ????????#INDvAUS pic.twitter.com/AqYhv8U9Qz
— BCCI (@BCCI) March 2, 2019
Advertisement
ಆಸ್ಟ್ರೇಲಿಯಾ ನೀಡಿದ 237 ರನ್ ಗುರಿ ಬೆನ್ನಟಿದ ಟೀಂ ಇಂಡಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಶಿಖರ್ ಧವನ್ ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ಮೊದಲ ಅಘಾತ ಎದುರಾಯಿತು. ಈ ವೇಳೆ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆಗೂಡಿ 2ನೇ ವಿಕೆಟ್‍ಗೆ 76 ರನ್ ಜೊತೆಯಾಟ ನೀಡಿದರು.
Advertisement
45 ಎಸೆತಗಳಲ್ಲಿ 44 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ಸ್ ಬೀಸುತ್ತಿದ್ದ ಕೊಹ್ಲಿರನ್ನು ಜಂಪಾ ಎಲ್‍ಬಿ ಬಲೆಗೆ ಕೆಡವಿದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಮಾನ ನೀಡಿದರು, ಡಿಆರ್‍ಎಸ್ ಪಡೆದ ಆಸೀಸ್ ವಿಕೆಟ್ ಪಡೆಯಲು ಯಶಸ್ವಿಯಾಯಿತು. ಇದರ ಬೆನ್ನಲ್ಲೇ 66 ಎಸೆಗಳಿಂದ 37 ರನ್ ಗಳಿದ್ದ ರೋಹಿತ್ ಶರ್ಮಾ ಫಿಂಚ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ರಾಯುಡು ಕೂಡ 13 ರನ್ ಗಳಿಸಿ ನಿರ್ಗಮಿಸಿದರು. ಪರಿಣಾಮ ತಂಡ 23.3 ಓವರ್ ಗಳಲ್ಲಿ 99 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
Advertisement
MS Dhoni finishes it off in style.
Kedar Jadhav (81*) and MS Dhoni (59*) hit half-centuries as #TeamIndia win by 6 wickets and take a 1-0 lead in the 5 match ODI series #INDvAUS pic.twitter.com/HHA7FfEDjZ
— BCCI (@BCCI) March 2, 2019
ಈ ಹಂತದಲ್ಲಿ ಒಂದಾದ ಮಾಜಿ ನಾಯಕ ಧೋನಿ ಹಾಗೂ ಕೇಧಾರ್ ಜಾದವ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ನಿರ್ಣಾಯಕ ಹಂತದಲ್ಲಿ ರನ್ ಕದಿಯುತ್ತ, ಕೆಟ್ಟ ಎಸೆತಗಳನ್ನು ದಂಡಿಸುತ್ತಾ 149 ಎಸೆತಗಳಲ್ಲಿ 141 ರನ್ ಗಳ ಶತಕ ಜೊತೆಯಾಟ ನೀಡಿ ಗೆಲುವು ತಂದರು. ಜಾಧವ್ 67 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ಧೋನಿ 68 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಸಿಡಿಸಿದರು. ಆ ಮೂಲಕ ಧೋನಿ ವೃತ್ತಿ ಜೀವನದ 106ನೇ ಅರ್ಧ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ ಜಾಧವ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರೆ, ಧೋನಿ 72 ಎಸೆತಗಳಿಂದ 59 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಆಸ್ಟ್ರೇಲಿಯಾ ಖವಾಜಾ ಅರ್ಧ ಶತಕ ಹಾಗೂ ಮ್ಯಾಕ್ಸ್ ವೆಲ್ 40 ರನ್ ಗಳ ನೆರವಿನಿಂದ ನಿಗದಿ 50 ಓವರ್ ಗಳಲ್ಲಿ 236 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾಗೆ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಶಮಿ 44/2, ಕುಲ್ದೀಪ್ ಯಾದವ್ 46/2, ಬುಮ್ರಾ 60/2 ವಿಕೆಟ್ ಪಡೆದರೆ, ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv